ಗುರುವಾರ , ಅಕ್ಟೋಬರ್ 6, 2022
23 °C
ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌

ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಭಾರತ ತಂಡದಲ್ಲಿ ಉನ್ನತಿ, ಅನುಪಮಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿಶ್ವ ಜೂನಿಯರ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಅನುಪಮಾ ಉಪಾಧ್ಯಾಯ ಮತ್ತು ಒಡಿಶಾ ಓಪನ್‌ ಚಾಂಪಿಯನ್‌ ಉನ್ನತಿ ಹೂಡಾ ಅವರು ಬಿಡಬ್ಲ್ಯುಎಫ್‌ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದಾರೆ.

ಸ್ಪೇನ್‌ನಲ್ಲಿ ಅಕ್ಟೋಬರ್‌ 17ರಿಂದ 30ರವರೆಗೆ ವಿಶ್ವ ಚಾಂಪಿಯನ್‌ಷಿಪ್ ನಡೆಯಲಿದೆ. ಕೋವಿಡ್‌ ಕಾರಣದಿಂದಾಗಿ ಎರಡು ವರ್ಷ ಸ್ಥಗಿತಗೊಂಡಿದ್ದ ಚಾಂಪಿಯನ್‌ಷಿಪ್‌ ಈ ಬಾರಿ ನಿಗದಿಯಾಗಿದೆ.

ಅಖಿಲ ಭಾರತ ರ‍್ಯಾಂಕಿಂಗ್‌ ಟೂರ್ನಿಗಳು ಮತ್ತು ಆಯ್ಕೆ ಟ್ರಯಲ್ಸ್ ಮೂಲಕ ತಂಡಗಳನ್ನು ಆಯ್ಕೆ ಮಾಡಲಾಗಿದೆ.

ಉತ್ತಮ ಫಾರ್ಮ್‌ನಲ್ಲಿರುವ ಭರತ್ ರಾಘವ್‌ ಹಾಗೂ ವಿಶ್ವ ರ‍್ಯಾಂಕಿಂಗ್‌ನಲ್ಲಿ ಈ ಹಿಂದೆ ಅಗ್ರಸ್ಥಾನದಲ್ಲಿದ್ದ ಶಂಕರ್ ಮುತ್ತುಸ್ವಾಮಿ ಅವರು ಬಾಲಕರ ಸಿಂಗಲ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ.

ಈ ಹಿಂದಿನ ಚಾಂಪಿಯನ್‌ಷಿಪ್‌ಗಳಲ್ಲಿ ಭಾರತ ತಲಾ ಮೂರು ಚಿನ್ನ, ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಜಯಿಸಿದೆ.

ಭಾರತ ತಂಡ ಇಂತಿದೆ: ಬಾಲಕರು: ಸಿಂಗಲ್ಸ್: ಭರತ್ ರಾಘವ್, ಶಂಕರ್ ಮುತ್ತುಸಾಮಿ ಎಸ್, ಆಯುಷ್ ಶೆಟ್ಟಿ. ಡಬಲ್ಸ್: ಅರ್ಷ್‌ ಮೊಹಮ್ಮದ್/ಅಭಿನವ್ ಠಾಕೂರ್, ನಿಕೋಲಸ್ ನಾಥನ್ ರಾಜ್/ತುಷಾರ್ ಸುವೀರ್.

ಬಾಲಕಿಯರು: ಸಿಂಗಲ್ಸ್: ಉನ್ನತಿ ಹೂಡಾ, ರಕ್ಷಿತಾ ಶ್ರೀ ಎಸ್, ಅನುಪಮಾ ಉಪಾಧ್ಯಾಯ. ಡಬಲ್ಸ್: ಇಶಾರಾಣಿ ಬರುವಾ/ದೇವಿಕಾ ಸಿಹಾಗ್, ಶ್ರೇಯಾ ಬಾಲಾಜಿ/ಶ್ರೀನಿಧಿ ಎನ್.

ಮಿಶ್ರ ಡಬಲ್ಸ್: ಸಮರವೀರ್/ರಾಧಿಕಾ ಶರ್ಮಾ, ವಿಘ್ನೇಶ್ ತತಿನೇನಿ/ಶ್ರೀ ಸಾಯಿ ಶ್ರಾವ್ಯಾ ಲಕ್ಕಮ್‌ರಾಜು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು