ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌: ರ‍್ಯಾಪಿಡ್‌ನಲ್ಲಿ ಆ್ಯಂಟೊನಿಯೊಗೆ ಪ್ರಶಸ್ತಿ

ಬ್ಲಿಟ್ಜ್‌ ವಿಭಾಗದಲ್ಲಿ ತಮಿಳುನಾಡಿನ ಮುತ್ತಯ್ಯ ಚಾಂಪಿಯನ್‌
Last Updated 21 ನವೆಂಬರ್ 2021, 15:34 IST
ಅಕ್ಷರ ಗಾತ್ರ

ಬೆಂಗಳೂರು: ಇಂಟರ್‌ನ್ಯಾಷನಲ್ ಮಾಸ್ಟರ್, ಕರ್ನಾಟಕದ ವಿಯಾನಿ ಆ್ಯಂಟೊನಿಯೊ ಡಿ’ಕುನ್ಹ ಅವರು ಇಲ್ಲಿ ನಡೆದ ಫಿಡೆ ರೇಟೆಡ್‌ ಎನ್‌ಜಿಐ ಅಖಿಲ ಭಾರತ ಮುಕ್ತ ರ‍್ಯಾಪಿಡ್ ಚೆಸ್ ಟೂರ್ನಿಯ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಯಲಹಂಕದ ರಾಮಗೊಂಡನಹಳ್ಳಿಯಲ್ಲಿರುವ ನಾಗಾರ್ಜುನ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಟೂರ್ನಿಯಲ್ಲಿ ವಿಯಾನಿ ಒಂಬತ್ತರ ಪೈಕಿ 8.5 ಪಾಯಿಂಟ್ ಗಳಿಸಿದರು. ತಮಿಳುನಾಡಿನ ಹೇಮಂತ್ ರಾಮ್‌ ಮತ್ತು ಇಂಟರ್‌ನ್ಯಾಷನಲ್‌ ಮಾಸ್ಟರ್ ಹರಿಕೃಷ್ಣ, ಮಹಾರಾಷ್ಟ್ರದ ಇಂಟರ್‌ನ್ಯಾಷನಲ್ ಮಾಸ್ಟರ್ ಸಮ್ಮೇದ್ ಜಯಕುಮಾರ್ ಮ್ತು ನಿಖಿಲ್ ದೀಕ್ಷಿತ್ ತಲಾ ಎಂಟು ಪಾಯಿಂಟ್ ಗಳಿಸಿದರು.

ಉತ್ತಮ ಟೈಬ್ರೇಕ್ ಸ್ಕೋರ್ ಆಧಾರದಲ್ಲಿ ಹೇಮಂತ್‌, ಸಮ್ಮೇದ್‌, ಹರಿಕೃಷ್ಣ ಮತ್ತು ನಿಖಿಲ್‌ ಕ್ರಮವಾಗಿ ಎರಡರಿಂದ ಐದನೇ ಸ್ಥಾನ ಗಳಿಸಿದರು.

ಬ್ಲಿಟ್ಜ್‌ ವಿಭಾಗದಲ್ಲಿ ತಮಿಳುನಾಡಿನ ಇಂಟರ್‌ನ್ಯಾಷನಲ್ ಮಾಸ್ಟರ್ ಮುತ್ತಯ್ಯ 8.5 ಪಾಯಿಂಟ್‌ಗಳೊಂದಿಗೆ ಮೊದಲಿಗರಾದರು. ಹರಿಕೃಷ್ಣ ಎಂಟು ಪಾಯಿಂಟ್ ಗಳಿಸಿ ಎರಡನೇ ಸ್ಥಾನಕ್ಕೆ ಮತ್ತು ಗ್ರ್ಯಾಂಡ್‌ಮಾಸ್ಟರ್ ವಿಷ್ಣು ಪ್ರಸನ್ನ ಮೂರನೇ ಸ್ಥಾನಕ್ಕೆ ತೃಪ್ತಿ‍ಪಟ್ಟುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT