ಸೋಮವಾರ, ಆಗಸ್ಟ್ 8, 2022
22 °C

ವಿಕಾಸ್ ಕೃಷ್ಣಗೆ ಅಮೆರಿಕದಲ್ಲಿ ತರಬೇತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಮೆರಿಕದಲ್ಲಿ ತರಬೇತಿ ಪಡೆಯಲು ಬಯಸಿದ್ದ ಬಾಕ್ಸರ್ ವಿಕಾಸ್ ಕೃಷ್ಣ ಅವರಿಗೆ ಭಾರತ ಕ್ರೀಡಾ ಪ್ರಾಧಿಕಾರದಿಂದ (ಸಾಯ್‌) ಹಸಿರು ನಿಶಾನೆ ಸಿಕ್ಕಿದೆ. ನವೆಂಬರ್ 30ರ ವರೆಗೆ ಅವರು ತರಬೇತಿ ಪಡೆಯಲಿದ್ದು ವೃತ್ತಿಪರ ಸ್ಪರ್ಧೆಗಳಲ್ಲೂ ಪಾಲ್ಗೊಳ್ಳಲಿದ್ದಾರೆ.

69 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ವಿಕಾಸ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಏಷ್ಯನ್ ಗೇಮ್ಸ್‌ನಲ್ಲೂ ಚಿನ್ನದ ಪದಕ ಗಳಿಸಿದ್ದಾರೆ. 'ಟಾರ್ಗೆಟ್ ಒಲಿಂಪಿಕ್‌ ಯೋಜನೆಯಲ್ಲಿ (ಟಾಪ್) ಇದ್ದ ವಿಕಾಸ್ ಕೃಷ್ಣ ಅಮೆರಿಕದಲ್ಲಿ ತರಬೇತಿ ಪಡೆಯಲು ಅನುಮತಿ ಕೋರಿದ್ದರು. ಅದನ್ನು ಮಾನ್ಯ ಮಾಡಲಾಗಿದೆ.  ಅವರ ತರಬೇತಿಗೆ ₹ 17.5 ಕೋಟಿ ಮೊತ್ತ ನೀಡುವುದಕ್ಕೂ ನಿರ್ಧರಿಸಲಾಗಿದೆ' ಎಂದು ಕ್ರೀಡಾ ಪ್ರಾಧಿಕಾರ ತಿಳಿಸಿದೆ.

'ಅಮೆರಿಕದ ಕೋಚ್ ರಾನ್ ಸಿಮನ್ಸ್ ಜೂನಿಯರ್ ಜೊತೆ ವಿಕಾಸ್ ಕೃಷ್ಣ ಈ ವಾರದ ಕೊನೆಯಲ್ಲಿ ಅಮೆರಿಕಕ್ಕೆ ತೆರಳಲಿದ್ದಾರೆ. ವರ್ಜೀನಿಯಾದ ಅಲೆಕ್ಸಾಂಡ್ರಿಯಾ ಬಾಕ್ಸಿಂಗ್ ಕ್ಲಬ್‌ನಲ್ಲಿ ಅವರು ಅಭ್ಯಾಸ ಮಾಡುವರು. ಅವರ ಪ್ರವಾಸ ಕಾರ್ಯಕ್ರಮವನ್ನು ಭಾರತ ಬಾಕ್ಸಿಂಗ್‌ನ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ಸ್ಯಾಂಟಿಯಾಗೊ ನಿವಿಯಾ ಅನುಮೋದಿಸಿದ್ದಾರೆ' ಎಂದು ಸಾಯ್ ತಿಳಿಸಿದೆ. 

'ಅನೇಕ ವರ್ಷಗಳಿಂದ ರಾಷ್ಟ್ರೀಯ ತಂಡದಲ್ಲಿರುವ ವಿಕಾಸ್ ಅವರು ಅಮೆರಿಕದಲ್ಲಿ ಉತ್ತಮ ಅನುಭವ ಪಡೆದುಕೊಳ್ಳಲಿದ್ದಾರೆ. ಅಲ್ಲಿಂದ ವಾಪಸ್ ಬಂದ ಮೇಲೆ ಮಹತ್ವದ ಟೂರ್ನಿಗಳಲ್ಲಿ ಪಾಲ್ಗೊಂಡು ಒಲಿಂಪಿಕ್ಸ್‌ಗೆ ಸಿದ್ಧತೆ ಮಾಡಿಕೊಳ್ಳಲಿದ್ದಾರೆ' ಎಂದು ನಿವಿಯಾ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು