ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌: ವಲಯ ಆಯ್ಕೆ ಇಂದು

Last Updated 15 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಪ್ರಥಮ ಮಹಿಳಾ ಡಬಲ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ ‘ರೆಡ್‌ ಬುಲ್‌ ಶಟ್ಲ್‌ ಅಪ್‌’ನ ಬೆಂಗಳೂರು ವಲಯದ ಅರ್ಹತಾ ಸುತ್ತಿನ ಪಂದ್ಯಗಳು ಇದೇ 16ರಂದು ನಗರದಲ್ಲಿ ನಡೆಯಲಿದೆ.

ಈ ಟೂರ್ನಿ ಜೆ.ಪಿ.ನಗರದ ಕೊತ್ತನೂರು ದಿಣ್ಣೆಯ ನೃಪತುಂಗಾ ನಗರದ ಫೇರ್‌ಪ್ಲೇ ಪ್ರದೇಶದಲ್ಲಿ ನಡೆಯಲಿದೆ. ಭಾಗವಹಿಸುವ ಸ್ಪರ್ಧಿಗಳು ಆನ್‌ಲೈನ್‌ನಲ್ಲಿ (https://bit.ly/2CEpPj0) ಅಥವಾ ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳಬಹುದು.

ರಾಷ್ಟ್ರೀಯ ವಿಜೇತರು ಆಶ್ವಿನಿ ಪೊನ್ನಪ್ಪ ಮತ್ತು ಅವರ ಜೊತೆಗಾರ್ತಿಯ ಜೊತೆ ಆಡಲಿದ್ದಾರೆ. ದೆಹಲಿ, ಹೈದರಾಬಾದ್‌, ಗುವಾಹಟಿ, ಚಂಡೀಗಡದಲ್ಲಿ ಅರ್ಹತಾ ಸುತ್ತು ನಡೆದಿದೆ.

ಬೆಂಗಳೂರು ವಲಯದ ವಿಜೇತರು ಹೈದರಾಬಾದ್‌ನಲ್ಲಿ ಡಿ. 8ರಂದು ನಡೆಯುವ ರಾಷ್ಟ್ರೀಯ ಫೈನಲ್‌ನಲ್ಲಿ ಆಡಲಿದ್ದಾರೆ.‌ ಮಾಹಿತಿಗೆ ಜೊನಾಥನ್‌ ( ಮೊ.ನಂ.9699950560) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT