ಭಾನುವಾರ, ಸೆಪ್ಟೆಂಬರ್ 19, 2021
23 °C
ಮೇ 19ರಂದು ವಿಶ್ವ ಟೆನ್‌–ಕೆ ಮ್ಯಾರಥಾನ್‌

ದತ್ತಿ ನಿಧಿ ಸಂಗ್ರಹ ಅಭಿಯಾನ

ಪ್ರಜಾವಾಣಿ ವಾತೆ೯ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವ ಟೆನ್‌–ಕೆ ಮ್ಯಾರಥಾನ್‌ಗೆ ದತ್ತಿ ನಿಧಿ ಸಂಗ್ರಹ ಅಭಿಯಾನದ ಘೋಷಣೆ ಕಾರ್ಯಕ್ರಮ ನಗರದ ಕಂಠೀರವ ಕ್ರೀಡಾಂಗಣ ದಲ್ಲಿ ಮಂಗಳವಾರ ನಡೆಯಿತು.

ಇಂಡಿಯಾ ಕೇರ್ ಫೌಂಡೇಷನ್‌ ಕಾರ್ಯನಿರ್ವಹಣಾಧಿಕಾರಿ ಮೀನಾ ದವೆ ಮಾತನಾಡಿ ‘ಮಾನವೀಯ, ಸಾಮಾಜಿಕ ಉದ್ದೇಶಗಳಿಗಾಗಿ ದೇಶ ದಾದ್ಯಂತ ನಿಧಿ ಸಂಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಹಲವು ಸಂಘಟನೆಗಳು ಅಭಿಯಾನಕ್ಕೆ ಕೈಜೋ ಡಿಸಿವೆ. 2018ರ ಆವೃತ್ತಿಯಲ್ಲಿ ಸುಮಾರು ₹ 5 ಕೋಟಿ ನಿಧಿ ಸಂಗ್ರಹವಾಗಿತ್ತು. ಈ ಸಾಲಿನಲ್ಲಿ ಅಧಿಕವಾಗುವ ನಿರೀಕ್ಷೆಯಿದೆ ಎಂದರು.

 ಸಿಎಸ್‌ಒ ಸಂಗಮ ಸಂಘಟನೆಯ ಕಾರ್ಯಕ್ರಮ ವ್ಯವಸ್ಥಾಪಕಿ, ತೃತೀಯ ಲಿಂಗಿ ನಿಶಾ ಗುಲುರ್‌ ಮಾತನಾಡಿ ‘ಸಮಾಜ ತೃತೀಯ ತೃತೀಯ ಲಿಂಗಿಗಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ. ಅವರಿಗೂ ಉತ್ತಮ ಬದುಕು ಸಿಗಬೇಕಿದೆ. ಈ  ಕಾರಣಕ್ಕಾಗಿ ತಮ್ಮ ಸಂಘಟನೆ ಈ ಅಭಿಯಾನಕ್ಕೆ ಕೈಜೋಡಿಸಿದೆ ಎಂದರು.

 ‘ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ದಿಂದ ವಂಚಿತವಾಗುತ್ತಿರುವ ಹೆಣ್ಣುಮಕ್ಕಳಿಗೆ ಸಯಾಯಾರ್ಥ ಉದ್ದೇಶದಿಂದ ತಮ್ಮ ಟ್ರಸ್ಟ್‌ ಶ್ರಮ ವಹಿಸುತ್ತಿದ್ದು, ಈ ಅಭಿಯಾನದಿಂದ ಮಹಿಳಾ ಸಬಲೀಕರಣಕ್ಕೆ ಇನ್ನಷ್ಟು ಶಕ್ತಿ ಸಿಗಲಿದೆ’ ಎಂದು ಚೆರಿಷ್‌ ಟ್ರಸ್ಟ್‌ನ ಗೀತಾ ಪೀಟರ್ಸ್‌ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.