ಮಂಗಳವಾರ, ನವೆಂಬರ್ 19, 2019
29 °C
ಭಾರತ ಶುಭಾರಂಭ

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಬ್ರಿಜೇಶ್‌ ಯಾದವ್‌ ಗೆಲುವಿನ ಪಂಚ್‌

Published:
Updated:

ಎಕಟೇರಿನ್‌ಬರ್ಗ್‌, ರಷ್ಯಾ: ವಿಶ್ವ ಪುರುಷರ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಶುಭಾರಂಭ ಮಾಡಿದೆ.  ಮಂಗಳವಾರ 81 ಕೆ.ಜಿ. ವಿಭಾಗದ ಮೊದಲ ಸುತ್ತಿನ ಬೌಟ್‌ನಲ್ಲಿ ಬ್ರಿಜೇಶ್‌ ಯಾದವ್‌ ಅವರು ಪೋಲೆಂಡ್‌ ಮಲೆಸಜ್‌ ಗೊಯಿನ್‌ಸ್ಕಿ ವಿರುದ್ಧ ಗೆದ್ದರು.

ಈ ವರ್ಷದ ಆರಂಭದಲ್ಲಿ ನಡೆದ ಥಾಯ್ಲೆಂಡ್‌ ಓಪನ್‌ ಹಾಗೂ ಇಂಡಿಯಾ ಓಪನ್‌ ಟೂರ್ನಿಗಳಲ್ಲಿ ಬೆಳ್ಳಿ ಜಯಿಸಿದ್ದ ಯಾದವ್‌, ಗೊಯಿನ್‌ಸ್ಕಿ ಅವರನ್ನು 5–0ಯಿಂದ ಸೋಲಿಸಿದರು. ಅಲ್ಲದೆ ಭಾರತದ ಆಟಗಾರನ ಪಂಚ್‌ಗೆ ಗೊಯಿನ್‌ಸ್ಕಿ ತಲೆಗೆ ಗಾಯವಾಗಿ ರಕ್ತವೂ ಚೆಲ್ಲಿತು.

ಬೌಟ್‌ನಲ್ಲಿ ಯಾದವ್‌ ಅವರು ಬಲಿಷ್ಠ ಪಂಚ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು. ಈ ಗೆಲುವಿನೊಂದಿಗೆ ಅವರು 32ನೇ ಸುತ್ತಿಗೆ ತಲುಪಿದರು. ಮುಂದಿನ ಸುತ್ತಿನಲ್ಲಿ ಅವರು ಟರ್ಕಿಯ ಬೈರಾಂ ಮಲ್ಕನ್‌ ಎದುರು ಸೆಣಸುವರು.

ಪ್ರತಿಕ್ರಿಯಿಸಿ (+)