ಬುಧವಾರ, ಆಗಸ್ಟ್ 21, 2019
22 °C

ವಿಶ್ವ ಕೆಡೆಟ್‌ ಕುಸ್ತಿ: ಸೋನಮ್‌ಗೆ ಚಿನ್ನದ ಪದಕ

Published:
Updated:

ನವದೆಹಲಿ: ಉತ್ತಮ ಪಟ್ಟುಗಳನ್ನು ಹಾಕಿದ ಭಾರತದ ಬಾಲಕಿ ಸೋನಮ್‌ ಮಲಿಕ್‌, ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ ವಿಶ್ವ ಕೆಡೆಟ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡನೇ ವರ್ಷ ಚಿನ್ನ ಗೆದ್ದುಕೊಂಡರು.

ಶುಕ್ರವಾರ, ಭಾರತದ ಇನ್ನೋರ್ವ ಸ್ಪರ್ಧಿ ಕೋಮಲ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಸೋನೆಪತ್‌ನ ಸೋನಮ್‌, 65 ಕೆ.ಜಿ. ವಿಭಾಗದಲ್ಲಿ ಚೀನಾದ ಬಿನ್‌ಬಿನ್‌ ಕ್ಸಿಯಾಂಗ್‌ ಮೇಲೆ 7–1 ರಿಂದ ಗೆದ್ದರು. 40 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಕೋಮಲ್‌, ಅಮೆರಿಕದ ಸ್ಟರ್ಲಿಂಗ್‌ ಬ್ಲೇಕ್‌ ವಿರುದ್ಧ ಸೆಣಸಲಿದ್ದಾರೆ.

ಬಾಲಕರ ಫ್ರೀಸ್ಟೈಲ್‌ನಲ್ಲಿ ಭಾರತದ ಪೈಲ್ವಾನರು ನಾಲ್ಕು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

48 ಕೆ.ಜಿ. ವಿಭಾಗದಲ್ಲಿ ಉದಿತ್‌, 55 ಕೆ.ಜಿ. ವಿಭಾಗದಲ್ಲಿ ಅಮನ್‌, 65 ಕೆ.ಜಿ. ವಿಭಾಗದಲ್ಲಿ ಮನಿಷ್‌ ಗೋಸ್ವಾಮಿ, 110 ಕೆ.ಜಿ. ವಿಭಾಗದಲ್ಲಿ ಅನಿರುದ್ಧ ಕುಮಾರ್‌ ಕಂಚಿನ ಪದಕ ಪಡೆದರು.

Post Comments (+)