ಬುಧವಾರ, ಡಿಸೆಂಬರ್ 8, 2021
18 °C

ವಿಶ್ವ ಮಹಿಳಾ ಚೆಸ್‌ ಚಾಂಪಿಯನ್‌ಷಿಪ್‌: ರಷ್ಯಾಗೆ ಮಣಿದ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಟ್‌ಜಸ್‌, ಸ್ಪೇನ್‌: ಸತತ ಎರಡು ಸುತ್ತುಗಳಲ್ಲಿ ಗೆಲುವಿನ ಸಿಹಿ ಉಂಡಿದ್ದ ಭಾರತ ತಂಡವು ವಿಶ್ವ ಮಹಿಳೆಯರ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ರಷ್ಯಾ ಎದುರು ಮಂಗಳವಾರ ನಿರಾಸೆ ಅನುಭವಿಸಿತು.

‘ಎ’ ಗುಂ‍ಪಿನ ಪಂದ್ಯದಲ್ಲಿ ಭಾರತದ ಆಟಗಾರ್ತಿಯರು 1–3ರಿಂದ ರಷ್ಯಾ ಎದುರು ಸೋತರು. ಆದರೆ ಈಗಾಗಲೇ ಕ್ವಾರ್ಟರ್‌ಫೈನಲ್‌ ತಲುಪಿರುವ ಭಾರತ ತಂಡವು ಪ್ರಿಲಿಮನರಿ ಹಂತದ ಐದನೇ ಸುತ್ತಿನಲ್ಲಿ ಫ್ರಾನ್ಸ್ ಎದುರು ಆಡಲಿದೆ.

ರಷ್ಯಾ ಎದುರಿನ ಸೆಣಸಾಟದಲ್ಲಿ ಭಾರತದ ದ್ರೋಣವಳ್ಳಿ ಹಾರಿಕಾ ಮತ್ತು ಮೇರಿ ಆ್ಯನಾ ಗೋಮ್ಸ್ ಅವರು ಕ್ರಮವಾಗಿ ಅಲೆಕ್ಸಾಂಡ್ರಾ ಗೋರಿಚ್‌ಕಿನಾ ಹಾಗೂ ಪೊಲಿನಾ ಶುವಲೊವಾ ಎದುರು ಡ್ರಾ ಸಾಧಿಸಿದರು. ಆದರೆ ತಾನಿಯಾ ಸಚ್‌ದೇವ್ ಮತ್ತು ಆರ್‌. ವೈಶಾಲಿ ಸೋಲು ಅನುಭವಿಸಿದರು.

ಇದಕ್ಕೂ ಮೊದಲು ಭಾರತ ತಂಡವು ಬಲಿಷ್ಠ ಆರ್ಮೇನಿಯಾ ಎದುರು 2.5–1.5ರಿಂದ ಗೆದ್ದಿದ್ದರೆ, ಸ್ಪೇನ್ ತಂಡವನ್ನು 2.5-1.5ರಿಂದ ಸೋಲಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು