ಸ್ನೂಕರ್: ಭಾರತದ ಗೆಲುವಿನ ಆರಂಭ

ದೋಹಾ (ಪಿಟಿಐ): ಹಾಲಿ ಚಾಂಪಿಯನ್ ಭಾರತ ತಂಡವು ಐಬಿಎಸ್‌ಎಫ್ ಸ್ನೂಕರ್ ವಿಶ್ವಕಪ್‌ನಲ್ಲಿ ಗೆಲುವಿನ ಆರಂಭ ಕಂಡಿದೆ.
ಶನಿವಾರ ಆಡಿದ ಎರಡು ಪಂದ್ಯಗಳಲ್ಲೂ ಭಾರತ ಜಯಭೇರಿ ಮೊಳಗಿಸಿದೆ.
ಮೊದಲ ಪೈಪೋಟಿಯಲ್ಲಿ ಭಾರತ 3–0 ಫ್ರೇಮ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿತು.
ನಂತರದ ಹಣಾಹಣಿಯಲ್ಲಿ ತಂಡವು 3–1 ಫ್ರೇಮ್‌ಗಳಿಂದ ಥಾಯ್ಲೆಂಡ್‌ಗೆ ಸೋಲುಣಿಸಿತು.
ಕರ್ನಾಟಕದ ಪಂಕಜ್ ಅಡ್ವಾಣಿ ಮತ್ತು ಲಕ್ಷ್ಮಣ್ ರಾವತ್ ಅವರು ಎರಡೂ ಹಣಾಹಣಿಗಳಲ್ಲಿ ಮಿಂಚಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.