ಬೆನ್ನು ನೋವಿನಿಂದ ಬಳಲುತ್ತಿದ್ದ ಕ್ರೀಡಾಪಟು ಸಾವು

7

ಬೆನ್ನು ನೋವಿನಿಂದ ಬಳಲುತ್ತಿದ್ದ ಕ್ರೀಡಾಪಟು ಸಾವು

Published:
Updated:
Deccan Herald

ದಾವಣಗೆರೆ: ಬೆನ್ನುನೋವಿನಿಂದ ಬಳಲುತ್ತಿದ್ದ ಉದಯೋನ್ಮುಖ ಕುಸ್ತಿಪಟು ಮಂಡ್ಯ ಜಿಲ್ಲೆಯ ಸೀತಾಪುರದ ವಿಕಾಸ್‌ ಕೆ.ಎಸ್‌. ಗೌಡ (20) ಬುಧವಾರ ಇಲ್ಲಿನ ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಯಲ್ಲಿ ನಿಧನರಾದರು.

ನಾಲ್ಕು ವರ್ಷಗಳಿಂದ ದಾವಣಗೆರೆಯ ಕ್ರೀಡಾ ಹಾಸ್ಟೆಲ್‌ನಲ್ಲಿ ತರಬೇತಿ ಪಡೆಯುತ್ತಿದ್ದ ವಿಕಾಸ್‌, 2017ರಲ್ಲಿ ಮೆಟ್ಟೂರಿನಲ್ಲಿ ನಡೆದ ದಕ್ಷಿಣ ಭಾರತ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಟೂರ್ನಿ, ರಾಷ್ಟ್ರೀಯ ಜೂನಿಯರ್ ವಿಭಾಗದ ಟೂರ್ನಿಯಲ್ಲೂ ವಿಕಾಸ್‌ ಸ್ಪರ್ಧಿಸಿದ್ದರು.

‘ವಿಕಾಸ್‌ಗೆ ಮೊದಲಿನಿಂದಲೂ ಉಸಿರಾಟದ ತೊಂದರೆಯಿತ್ತು. ಆದರೆ, ಆತ ಫಿಟ್‌ ಆಗಿದ್ದ. ಬೆನ್ನುನೋವು ಕಾಣಿಸಿಕೊಂಡಿದ್ದರಿಂದ ವಾರದ ಹಿಂದೆ ನೋವುನಿವಾರಕ ಗುಳಿಗೆ ನುಂಗಿದ್ದ. ಆಗಿನಿಂದ ಆರೋಗ್ಯದಲ್ಲಿ ಏರುಪೇರಾಯಿತು’ ಎಂದು ಧಾರವಾಡದ ಕ್ರೀಡಾ ಹಾಸ್ಟೆಲ್‌ನಲ್ಲಿ ಕುಸ್ತಿ ಕೋಚ್‌ ಆಗಿರುವ ವಿಕಾಸ್‌ ಅವರ ದೊಡ್ಡಪ್ಪ ಶ್ರೀನಿವಾಸ ಗೌಡ ತಿಳಿಸಿದರು.

ಗುರುವಾರ ವಿಕಾಸ್‌ ಗೌಡ ಅವರ ಸ್ವಂತ ಊರು ಸೀತಾಪುರದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !