ಸೋಮವಾರ, ಏಪ್ರಿಲ್ 19, 2021
32 °C
ಯೂತ್ ಬಾಲಕಿಯರ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶ; ಜೂನಿಯರ್ ವಿಭಾಗದಲ್ಲಿ ಸೋಲು

ಟೇಬಲ್ ಟೆನಿಸ್: ಯಶಸ್ವಿನಿ ಘೋರ್ಪಡೆಗೆ ಮಿಶ್ರ ಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕದ ಯಶಸ್ವಿನಿ ಘೋರ್ಪಡೆ, ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ಯೂತ್ ಬಾಲಕಿಯರ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು. ಆದರೆ ಜೂನಿಯರ್ ವಿಭಾಗದಲ್ಲಿ ನಿರಾಸೆ ಅನುಭವಿಸಿದರು.

ಸೋಮವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು ಮಧ್ಯಪ್ರದೇಶದ ಅನುಷಾ ವಿರುದ್ಧ ಜಯ ಸಾಧಿಸಿದರು. ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಅವರು ತಮಿಳುನಾಡಿನ ಯಾಶಿನಿ ಶಿವಶಂಕರ್ ಎದುರು ಗೆಲುವು ಸಾಧಿಸಿದರು. ಎರಡನೇ ಸುತ್ತಿನಲ್ಲಿ ಮಹಾರಾಷ್ಟ್ರದ ಸ್ವಸ್ತಿಕಾ ಘೋಷ್‌ ವಿರುದ್ಧ ಜಯ ಗಳಿಸಿದ್ದರು.

ಇದೇ ವಿಭಾಗದಲ್ಲಿ ಕರ್ನಾಟಕದ ಖುಷಿ ಬಂಗಾಳದ ಪೊಯ್ಮಂತಿ ಬೈಸ್ಯ ವಿರುದ್ಧ ಎರಡನೇ ಸುತ್ತಿನಲ್ಲಿ ಸೋತು ಹೊರಬಿದ್ದರು. ಅನರ್ಘ್ಯ ತಮಿಳುನಾಡಿನ ಶ್ರುತಿ ರಾಮ್‌ಕುಮಾರ್‌ಗೆ ಮಣಿದು ಮೊದಲ ಸುತ್ತಿನಲ್ಲೇ ಹೊರಬಿದ್ದರು. 

ಜೂನಿಯ‌ರ್ ವಿಭಾಗದಲ್ಲಿ ನಿರಾಸೆ

ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಯಶಸ್ವಿನಿ ಘೋರ್ಷಡೆ ನಿರಾಸೆ ಅನುಭವಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಅವರು ಹರಿಯಾಣದ ಸುಹಾನ ಸೈನಿ ವಿರುದ್ಧ ಸೋತರು. ಅನರ್ಘ್ಯ ಕೂಡ ಕ್ವಾರ್ಟರ್ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು. ಮಹಾರಾಷ್ಟ್ರದ ಸ್ವಸ್ತಿಕಾ ಘೋಷ್‌ಗೆ ಅವರು ಮಣಿದರು.

ಪ್ರಿಕ್ವಾರ್ಟರ್ ಫೈನಲ್‌ನಲ್ಲಿ ಯಶಸ್ವಿನಿ ಬಂಗಾಳದ ಮೌಳಿ ಎಂ ವಿರುದ್ಧ ಮತ್ತು ಅನರ್ಘ್ಯ ಟಿಟಿಎಫ್‌ಐನ ತ್ರಿಶಾ ವಿರುದ್ಧ ಗೆಲುವು ಸಾಧಿಸಿದರು. ಅದಿತಿ ಜೋಶಿ ಮತ್ತು ಕರುಣಾ ಕ್ರಮವಾಗಿ ದೆಹಲಿಯ ಲಕ್ಷಿತ್ ಮತ್ತು ಮಹಾರಾಷ್ಟ್ರದ ಸ್ವಸ್ತಿಕಾ ಎದುರು ಸೋತರು.

ಎರಡನೇ ಸುತ್ತಿನಲ್ಲಿ ಯಶಸ್ವಿನಿ ಮಹಾರಾಷ್ಟ್ರದ ಸಂಪದ ವಿರುದ್ಧ, ಅನರ್ಘ್ಯ ತಮಿಳುನಾಡಿನ ಶರ್ಮಿತಾ ವಿರುದ್ಧ, ಕರುಣಾ ಬಂಗಾಳದ ಸಮೃದ್ಧಿ ವಿರುದ್ಧ ಮತ್ತು ಅದಿತಿ ತೆಲಂಗಾಣದ ಇಕ್ಷಿತಾ ವಿರುದ್ಧ ಜಯ ಗಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.