ಬುಧವಾರ, ಜೂನ್ 23, 2021
30 °C
ಫೈನಲ್‌ನಲ್ಲಿ ಎಡವಿದ ಇಟಲಿಯ ಮ್ಯಾಟಿಯೊ ಬೆರೆಟಿನಿ

ಜ್ವೆರೆವ್‌ಗೆ ಮ್ಯಾಡ್ರಿಡ್ ಓಪನ್ ಕಿರೀಟ

ಎಪಿ Updated:

ಅಕ್ಷರ ಗಾತ್ರ : | |

Prajavani

ಮ್ಯಾಡ್ರಿಡ್‌ : ಅದ್ಭುತ ಲಯ ಮುಂದುವರಿಸಿದ ಅಲೆಕ್ಸಾಂಡರ್ ಜ್ವೆರೆವ್‌ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದರು. ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ 6–7, 6–4, 6–3ರಿಂದ ಮ್ಯಾಟಿಯೊ ಬೆರೆಟಿನಿ ಅವರನ್ನು ಪರಾಭವಗೊಳಿಸಿದ ಜರ್ಮನಿಯ ಆಟಗಾರ ಎರಡನೇ ಬಾರಿ ಈ ಪ್ರಶಸ್ತಿಗೆ ಮುತ್ತಿಟ್ಟರು.

ಮೊದಲ ಸೆಟ್‌ ಹಿನ್ನಡೆಯಿಂದ ಚೇತರಿಸಿಕೊಂಡ ಜ್ವೆರೆವ್, ಇಟಲಿ ಆಟಗಾರನ ವಿರುದ್ಧ ಅರ್ಹ ಗೆಲುವು ಸಂಪಾದಿಸಿದರು.

ಕ್ವಾರ್ಟರ್‌ಫೈನಲ್‌ನಲ್ಲಿ ಅಗ್ರಶ್ರೇಯಾಂಕದ ರಫೆಲ್ ನಡಾಲ್‌ಗೆ ಸೋಲುಣಿಸಿದ್ದ ಜ್ವೆರೆವ್‌, ಸೆಮಿಫೈನಲ್‌ನಲ್ಲಿ ನಾಲ್ಕನೇ ರ‍್ಯಾಂಕ್‌ನ ಡಾಮಿನಿಕ್ ಥೀಮ್‌ ಅವರನ್ನು ಮಣಿಸಿದ್ದರು.

ಮಾರ್ಚ್‌ನಲ್ಲಿ ನಡೆದ ಅಕಪಲ್ಕೊ ಟೂರ್ನಿಯಲ್ಲೂ ಜ್ವೆರೆವ್‌ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.

2018ರ ಮ್ಯಾಡ್ರಿಡ್ ಓಪನ್‌ ಫೈನಲ್‌ನಲ್ಲಿ ಅವರು ಥೀಮ್ ಅವರನ್ನು ಮಣಿಸಿದ್ದರು.

ಬೆರೆಟಿನಿ ಅವರು ಕಳೆದ ವಾರ ಬೆಲ್‌ಗ್ರೇಡ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದರು. ಹೊಟ್ಟೆನೋವಿನ ಕಾರಣ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಕ್ವಾರ್ಟರ್‌ಫೈನಲ್ ಪಂದ್ಯದಿಂದ ಹಿಂದೆ ಸರಿದಿದ್ದ ಅವರು, ಬಳಿಕ ಚೇತರಿಸಿಕೊಂಡು ಲಯ ಕಂಡುಕೊಂಡಿದ್ದರು.

ಮಾರ್ಸೆಲ್ –ಹೊರೆಷಿಯೊಗೆ ಡಬಲ್ಸ್ ಗರಿ: ಸ್ಪೇನ್‌ನ ಮಾರ್ಸೆಲ್ ಗ್ರ್ಯಾನೊಲರ್ಸ್‌ ಹಾಗೂ ಅರ್ಜೆಂಟೀನಾದ ಹೊರೆಷಿಯೊ ಜೆಬಾಲ್ಲೋಸ್ ಜೋಡಿಯು ಪುರುಷರ ಡಬಲ್ಸ್ ವಿಭಾಗದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಇವರು 1–6, 6–3, 10–8ರಿಂದ ಕ್ರೊವೇಷ್ಯಾದ ನಿಕೋಲಾ ಮೆಕ್ಟಿಚ್‌ ಹಾಗೂ ಮೇಟ್ ಪಾವಿಚ್ ಅವರನ್ನು ಸೋಲಿಸಿದರು.

ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೆ ಮರಳಿದ ಮೆಡ್ವೆಡೆವ್‌: ಸ್ಪೇನ್‌ನ ರಫೆಲ್ ನಡಾಲ್ ಅವರನ್ನು ಹಿಂದಿಕ್ಕಿದ ಡ್ಯಾನಿಲ್ ಮೆಡ್ವೆಡೆವ್ ಅವರು ಎಟಿಪಿ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೆ ಮರಳಿದರು. ಸೋಮವಾರ ಪ್ರಕಟಿಸಲಾದ ಕ್ರಮಾಂಕಗಳಲ್ಲಿ, ಮೊದಲ ಬಾರಿ ಅಮೆರಿಕದ ಒಬ್ಬರೂ ಆಟಗಾರರ ಅಗ್ರ 10ರ ಪಟ್ಟಿಯಲ್ಲಿ ಸ್ಥಾನ ಗಳಿಸಿಲ್ಲ.

ಜ್ವೆರೆವ್ ಆರನೇ ಸ್ಥಾನದಲ್ಲಿ ಮುಂದುವರಿದಿದ್ದು, ನೊವಾಕ್ ಜೊಕೊವಿಚ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಡಾಮಿನಿಕ್ ಥೀಮ್ ಹಾಗೂ ಸ್ಟೆಫನೋಸ್ ಸಿಟ್ಸಿಪಾಸ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು