ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವನಾತ್ಮಕ ಸಂದೇಶ ಹರಿಬಿಟ್ಟ ಲಿಯಾಂಡರ್ ಪೇಸ್: ಮುಂದಿನ ವರ್ಷ ಟೆನಿಸ್‌ಗೆ ವಿದಾಯ

Last Updated 26 ಡಿಸೆಂಬರ್ 2019, 6:19 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಹಿರಿಯ ಟೆನಿಸ್‌ ಆಟಗಾರ ಲಿಯಾಂಡರ್ ಪೇಸ್ ಅವರು 2020ರಲ್ಲಿ ನಿವೃತ್ತರಾಗುವುದಾಗಿ ಬುಧವಾರ ಘೋಷಿಸಿದ್ದಾರೆ.ಈ ಸಂಬಂಧ ಟ್ವಿಟರ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿಕೊಂಡಿದ್ದಾರೆ.

ಎಲ್ಲರಿಗೂ ಕ್ರಿಸ್‌ಮಸ್‌ ಶುಭಾಶಯಗಳನ್ನು ತಿಳಿಸಿರುವಪೇಸ್‌, 2020 ನನ್ನ ಟೆನಿಸ್‌ ಬದುಕಿನ ವಿದಾಯದ ವರ್ಷವಾಗಲಿದೆ ಎಂದು ಘೋಷಿಸಲಿಚ್ಛಿಸುತ್ತೇನೆ ಎಂದು ತಿಳಿಸಿದ್ದಾರೆ.

‘ನನ್ನ ವೃತ್ತಿಬದುಕಿನುದ್ದಕ್ಕೂ ಸಲಹೆ, ಮಾರ್ಗದರ್ಶನ, ಪ್ರೀತಿ,‍ಪೂರಕ ವಾತಾವರಣವನ್ನು ಕಲ್ಪಿಸಿಕೊಟ್ಟ ತಂದೆ–ತಾಯಿಗೆ ಮೊದಲು ಧನ್ಯವಾದ ಹೇಳುತ್ತೇನೆ. ನಿಮ್ಮ ಬೆಂಬಲವಿಲ್ಲದೆ ನಾನಿಲ್ಲ. ಐ ಲವ್‌ ಯೂ’ ಎಂದು ಬರೆದುಕೊಂಡಿದ್ದಾರೆ.ನನ್ನ ಏಳುಬೀಳಿನ ಹಾದಿಯಲ್ಲಿ ಜೊತೆಗಿದ್ದ ಸೋದರಿಯರು ಹಾಗೂ ಸ್ಫೂರ್ತಿಯಾದ ಮಗಳಿಗೂ ಕೃತಜ್ಞತೆ ಹೇಳಿದ್ದಾರೆ.

ಮುಂದುವರಿದು, ‘2020ರಲ್ಲಿ ಆಡಲಿರುವ ಕೆಲವೇ ಆಯ್ದ ಟೂರ್ನಿಗಳತ್ತ ಗಮನ ಹರಿಸಿದ್ದೇನೆ.ಈ ವರ್ಷವನ್ನು ನಾನು ಇಷ್ಟು ಬೆಳೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಲು ಬಳಸಿಕೊಳ್ಳುತ್ತೇನೆ’ ಎಂದಿದ್ದಾರೆ. ಜೊತೆಗೆ, ‘#OneLastRoar ಹ್ಯಾಷ್‌ಟ್ಯಾಗ್‌ನೊಂದಿಗೆ ನನ್ನ ವೃತ್ತಿ ಬದುಕಿನ ಸ್ಮರಣೀಯ ಕ್ಷಣಗಳನ್ನು ಹಂಚಿಕೊಳ್ಳಿ. ನಾನೂ ಬರೆದುಕೊಳ್ಳುತ್ತೇನೆ’ ಎಂದು ತಿಳಿಸಿದ್ದಾರೆ.

‘ಈ ವರ್ಷ (2020) ನನ್ನ ಪಾಲಿಗೆ ಭಾವನಾತ್ಮಕವಾಗಿರಲಿದೆ. ನೀವೆಲ್ಲರೂ ನನ್ನೊಂದಿಗೆ ಘರ್ಜಿಸುವುದನ್ನು ಎದುರುನೋಡುತ್ತಿದ್ದೇನೆ’ ಎಂದೂ ಹೇಳಿಕೊಂಡಿದ್ದಾರೆ.

18 ಗ್ರ್ಯಾಂಡ್‌ಸ್ಲ್ಯಾಮ್ ಡಬಲ್ಸ್ ಪ್ರಶಸ್ತಿ ಸೇರಿದಂತೆ ನೂರಾರು ಪ್ರಮುಖ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ 46 ವರ್ಷದ ಪೇಸ್ 19 ವರ್ಷಗಳಲ್ಲಿ ಇತ್ತೀಚೆಗೆ ಇದೇ ಮೊದಲ ಬಾರಿ ರ‍್ಯಾಂಕಿಂಗ್‌ನಲ್ಲಿ ಅಗ್ರ 100ರ ಒಳಗಿನ ಸ್ಥಾನವನ್ನು ಕಳೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT