ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಟಿಎ ಆಯ್ಕೆ ಸಮಿತಿಗೆ ಜೀಶನ್‌ ಸೇರ್ಪಡೆ

Last Updated 3 ಜನವರಿ 2019, 20:00 IST
ಅಕ್ಷರ ಗಾತ್ರ

ಪುಣೆ (ಪಿಟಿಐ): ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಡೇವಿಸ್‌ ಕಪ್‌ ತಂಡದ ಮುಖ್ಯ ಕೋಚ್‌ ಜೀಶನ್‌ ಅಲಿ ಅವರನ್ನು ಗುರುವಾರ ಸೀನಿಯರ್‌ ಆಯ್ಕೆ ಸಮಿತಿಗೆ ಸೇರ್ಪಡೆ ಮಾಡಿದೆ.

ಇತ್ತೀಚೆಗೆ ಗುರುಗ್ರಾಮದಲ್ಲಿ ನಡೆದಿದ್ದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಸದಸ್ಯ ಸ್ಥಾನದಿಂದ ಜೀಶನ್‌ ಅವರನ್ನು ವಜಾಗೊಳಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನದಿಂದ ಎಸ್‌.ಪಿ.ಮಿಶ್ರಾ ಅವರನ್ನು ಕೆಳಗಿಳಿಸಲಾಗಿತ್ತು. ಇವರ ಬದಲಿಗೆ ವಿಶಾಲ್‌ ಉಪ್ಪಳ ಮತ್ತು ಅಂಕಿತಾ ಭಾಂಬ್ರಿ ಅವರನ್ನು ನೇಮಿಸಲಾಗಿತ್ತು.

ಆಯ್ಕೆ ಸಮಿತಿಯ ಸದಸ್ಯ ರೋಹಿತ್‌ ರಾಜ್‌ಪಾಲ್‌ ಅವರನ್ನು ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ನಂದನ್‌ ಬಾಲಾ ಮತ್ತು ಬಲರಾಮ್‌ ಸಿಂಗ್‌ ಅವರನ್ನು ಸದಸ್ಯರನ್ನಾಗಿ ಮುಂದುವರಿಸುವ ನಿರ್ಣಯವನ್ನೂ ಕೈಗೊಳ್ಳಲಾಗಿತ್ತು.

‘ಜೀಶನ್‌ ಅವರು ಆಟಗಾರರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಅವರನ್ನು ಆಯ್ಕೆ ಸಮಿತಿಗೆ ಮರು ಸೇರ್ಪಡೆ ಮಾಡಲಾಗಿದೆ. ಡೇವಿಸ್‌ ಕಪ್‌ ತಂಡದ ಕೋಚ್‌ ಕೂಡಾ ಆಗಿರುವ ಅವರು ಆಟಗಾರರ ಫಿಟ್‌ನೆಸ್‌ ಸೇರಿದಂತೆ ಇತರೆ ವಿಷಯಗಳ ಕುರಿತು ಆಯ್ಕೆ ಸಮಿತಿಗೆ ಸೂಕ್ತ ಮಾಹಿತಿ ಒದಗಿಸಲಿದ್ದಾರೆ’ ಎಂದು ಎಐಟಿಎ ಆಯ್ಕೆ ಸಮಿತಿ ಮುಖ್ಯಸ್ಥ ರಾಜ್‌ಪಾಲ್‌ ತಿಳಿಸಿದ್ದಾರೆ.

‘ಸಮಿತಿಯಿಂದ ಉಪ್ಪಳ ಅವರನ್ನು ತೆಗೆದುಹಾಕಲಾಗಿದೆ. ಈ ಕುರಿತು ಅವರಿಗೆ ಮಾಹಿತಿ ನೀಡಿದ್ದೇವೆ. ಅವರು ನಮ್ಮ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಹೇಳಿದ್ದಾರೆ’ ಎಂದು ರಾಜ್‌ಪಾಲ್‌ ನುಡಿದಿದ್ದಾರೆ.

‘ನನ್ನನ್ನು ಸಮಿತಿಯಿಂದ ತೆಗೆದುಹಾಕಬೇಕೆಂಬುದು ಎಐಟಿಎ ನಿರ್ಧಾರವಾಗಿತ್ತು. ಅದಕ್ಕೆ ಬದ್ಧನಾಗಿದ್ದೆ. ಈಗ ಮತ್ತೆ ಸಮಿತಿಗೆ ಸೇರ್ಪಡೆ ಮಾಡಿದ್ದು ಖುಷಿ ನೀಡಿದೆ. ಟೆನಿಸ್‌ ಸಂಸ್ಥೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುತ್ತೇನೆ. ಆಟಗಾರರ ಫಿಟ್‌ನೆಸ್‌ ಸೇರಿದಂತೆ ಇತರೆ ಮಾಹಿತಿಗಳನ್ನು ಸಮಿತಿಗೆ ನೀಡುವುದು ನನ್ನ ಕರ್ತವ್ಯ. ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ’ ಎಂದು ಜೀಶನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT