ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಪ್ರೀಕ್ವಾರ್ಟರ್‌ಫೈನಲ್‌ಗೆ ಆಕರ್ಷ್‌

Last Updated 23 ನವೆಂಬರ್ 2021, 6:46 IST
ಅಕ್ಷರ ಗಾತ್ರ

ಬೆಂಗಳೂರು: ಎರಡನೇ ಶ್ರೇಯಾಂಕದ ಯಶ್‌ ಪಿ. ಅವರಿಗೆ ಸೋಲುಣಿಸಿದ ಆಕರ್ಷ್‌ ಗಾಂವಕರ್‌ ಎಐಟಿಎ ಸಿಎಸ್‌7 18 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಪ್ರೀಕ್ವಾರ್ಟರ್‌ಫೈನಲ್‌ ತಲುಪಿದ್ದಾರೆ.

ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಆಕರ್ಷ್‌ 9-7ರಿಂದ ಯಶ್ ಅವರಿಗೆ ಸೋಲುಣಿಸಿದರು. ಬಾಲಕರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ಕ್ರಿಶ್ ಅಜಯ್ ತ್ಯಾಗಿ 9–1ರಿಂದ ವಿರಾಜ್ ಎದುರು, ಮನದೀಪ್ ರೆಡ್ಡಿ 9–2ರಿಂದ ರಹೇಯಾ ಎನ್‌. ವಿರುದ್ಧ, ಅದಿತ್ ಅಮರನಾಥ್‌ 9–6ರಿಂದ ಗಂಧರ್ವ ಜಿ. ಎದುರು ಜಯ ಸಾಧಿಸಿದರು.

ಬಾಲಕಿಯರ ವಿಭಾಗದಮೊದಲ ಸುತ್ತಿನ ಹಣಾಹಣಿಗಳಲ್ಲಿ ಹೃದಯೇಶಿ 9–3ರಿಂದ ಬಿನಿತಾ ರಾಕೇಶ್‌ ಎದುರು, ಸಂಸ್ಕೃತಿ 9-3ರಿಂದ ಇಂಚರಾ ವಿರುದ್ಧ, ನಿಧಿ ಭುವಿಲಾ 9-1ರಿಂದ ಗಾಯಶ್ರೀ ಎದುರು ಗೆದ್ದರು.

ರುಹಾನ್‌ಗೆ ಮುನ್ನಡೆ: 12 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ರುಹಾನ್ ಕೊಮಂದೂರ್‌ ಪ್ರೀಕ್ವಾರ್ಟರ್‌ಫೈನಲ್ ತಲುಪಿದರು.

ಮೊದಲ ಸುತ್ತಿನ ಪಂದ್ಯದಲ್ಲಿ ಅವರು 7-5, 6-0ರಿಂದ ಅಥರ್ವ್‌ ವೇದರಾಜ್ ಎದುರು ಗೆದ್ದರು. ದರ್ಶ್ ಹರ್ಷದ್ 6-0, 6-1ರಿಂದ ತರುಣ್ ಎಚ್‌. ಅವರನ್ನು ಸೋಲಿಸಿ ಪ್ರೀಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT