ಸೋಮವಾರ, ಏಪ್ರಿಲ್ 19, 2021
25 °C

ಟೆನಿಸ್‌: ಪ್ರಜ್ಞೇಶ್‌ಗೆ ಸೋಲು

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ನ್ಯೂಪೋರ್ಟ್‌, ಅಮೆರಿಕ: ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌, ಹಾಲ್‌ ಆಫ್‌ ಫೇಮ್‌ ಓಪನ್‌ ಎಟಿಪಿ ಟೆನಿಸ್‌ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಸೋತಿದ್ದಾರೆ.

ಸೋಮವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಹಣಾಹಣಿಯಲ್ಲಿ ಪ್ರಜ್ಞೇಶ್‌ 2–6, 2–6 ನೇರ ಸೆಟ್‌ಗಳಿಂದ ಸ್ಪೇನ್‌ನ ಮಾರ್ಷಲ್‌ ಗ್ರಾನೊಲ್ಲರ್ಸ್‌ ಎದುರು ಮಣಿದರು.

ಈ ಹೋರಾಟದಲ್ಲಿ ಮೂರು ಏಸ್‌ಗಳನ್ನು ಸಿಡಿಸಿದ ಭಾರತದ ಆಟಗಾರ, ಮೂರು ‘ಡಬಲ್‌ ಫಾಲ್ಟ್‌’ ಎಸಗಿದರು. ಬ್ರೇಕ್‌ ಪಾಯಿಂಟ್ಸ್‌ ಕಲೆಹಾಕಲೂ ವಿಫಲರಾದರು.

ಮುಖ್ಯ ಸುತ್ತಿಗೆ ರಾಮಕುಮಾರ್‌: ರಾಮಕುಮಾರ್ ರಾಮನಾಥನ್‌ ಮುಖ್ಯ ಸುತ್ತು ಪ್ರವೇಶಿಸಿದರು.

ಅರ್ಹತಾ ಸುತ್ತಿನ ಪಂದ್ಯದಲ್ಲಿ ರಾಮಕುಮಾರ್‌ 6–4, 6–7, 6–3ಯಿಂದ ಯೂಚಿ ಸುಗಿಟಾ ಎದುರು ಗೆದ್ದರು. ಭಾರತದ ಆಟಗಾರ ಒಟ್ಟು 15 ಏಸ್‌ಗಳನ್ನು ಸಿಡಿಸಿ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

ಮುಖ್ಯ ಸುತ್ತಿನಲ್ಲಿ ರಾಮಕುಮಾರ್‌, ಸರ್ಜಿ ಸ್ಟಾಕೊವ್‌ಸ್ಕಿ ವಿರುದ್ಧ ಆಡಲಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.