ಶುಕ್ರವಾರ, ಜನವರಿ 17, 2020
22 °C

ಕತಾರ್‌ ಓಪನ್‌: ಬೋಪಣ್ಣ ಜೋಡಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೋಹಾ: ಭಾರತದ ರೋಹನ್‌ ಬೋಪಣ್ಣ, ನೆದರ್ಲೆಂಡ್ಸ್‌ನ ವೆಸ್ಲಿ ಕೂಲ್‌ಹಾಫ್‌ ಜೊತೆಗೂಡಿ, ₹ 10.4 ಕೋಟಿ ಬಹುಮಾನ ಮೊತ್ತದ ಕತಾರ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪುರುಷರ ಡಬಲ್ಸ್‌ ಪ್ರಶಸ್ತಿ ಗೆಲ್ಲುವ ಮೂಲಕ ಹೊಸ ವರ್ಷವನ್ನು ಯಶಸ್ಸಿನೊಡನೆ ಆರಂಭಿಸಿದರು. 

ಶುಕ್ರವಾರ ರಾತ್ರಿ ನಡೆದ ಫೈನಲ್‌ ಪಂದ್ಯದಲ್ಲಿ ಹಿನ್ನಡೆಯಿಂದ ಚೇತರಿಸಿಕೊಂಡ ಮೂರನೇ ಶ್ರೇಯಾಂಕದ ರೋಹನ್‌– ವೆಸ್ಲಿ ಜೋಡಿ 3–6, 6–2, 10–6 ರಿಂದ ಶ್ರೇಯಾಂಕರಹಿತ ಲ್ಯೂಕ್‌ ಬಾಂಬ್ರಿಜ್‌– ಸಾಂಟಿಯಾಗೊ ಗೊನ್ವಾಲ್ವೆಝ್‌ ಜೊತೆಯನ್ನು ಸೋಲಿಸಿತು. 

ಡಬಲ್ಸ್‌ ಗೆದ್ದ ಜೋಡಿ ₹ 54.57 ಲಕ್ಷ ಬಹುಮಾನ ಮೊತ್ತವನ್ನು ಜೇಬಿಗಿಳಿಸಿತು. 250 ಎಟಿಪಿ ಪಾಯಿಂಟ್‌ಗಳೂ ಅವರ ಖಾತೆಯಲ್ಲಿ ಸಂಗ್ರಹವಾದವು.

ಬೋಪಣ್ಣ– ವೆಸ್ಲಿ ಜೋಡಿ ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಜೋಡಿಯನ್ನು (ಹೆನ್ರಿ ಕೊಂಟಿನೆನ್‌– ಫ್ರಾಂಕೊ ಸ್ಕುಗೊರ್‌) ಸೋಲಿಸಿತ್ತು.

ಪ್ರತಿಕ್ರಿಯಿಸಿ (+)