ರಾಮಕುಮಾರ್‌, ಅಂಕಿತಾ ಶುಭಾರಂಭ

7
ಆಸ್ಟ್ರೇಲಿಯಾ ಓಪನ್‌ ಟೆನಿಸ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು

ರಾಮಕುಮಾರ್‌, ಅಂಕಿತಾ ಶುಭಾರಂಭ

Published:
Updated:
Prajavani

ಮೆಲ್ಬರ್ನ್‌: ಭಾರತದ ರಾಮಕುಮಾರ್ ರಾಮನಾಥನ್‌ ಮತ್ತು ಅಂಕಿತಾ ರೈನಾ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿ ಶುಭಾರಂಭ ಮಾಡಿದರು. ಆದರೆ ಕರ್ಮನ್‌ ಕೌರ್ ಥಾಂಡಿ ಮೊದಲ ಸುತ್ತಿನಲ್ಲಿ ಸೋತು ನಿರಾಸೆಗೆ ಒಳಗಾದರು.

21ನೇ ಶ್ರೇಯಾಂಕ ಹೊಂದಿರುವ ರಾಮಕುಮಾರ್‌ ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಸ್ಪೇನ್‌ನ ಸರ್ಜಿಯೊ ಗುಟೆರಜ್‌ ಫೆರಾಲ್ ಅವರನ್ನು 6–3, 6–2ರಿಂದ ಮಣಿಸಿದರು. ವೈಯಕ್ತಿಕ ಮೂರನೇ ಬಾರಿ ಗ್ರ್ಯಾನ್‌ಸ್ಲಾಂ ಅರ್ಹತಾ ಸುತ್ತಿನಲ್ಲಿ ಆಡುತ್ತಿರುವ ಅಂಕಿತಾ ಫ್ರಾನ್ಸ್‌ನ ಮಿರ್ತಿಲೆ ಜಾರ್ಜಸ್ ಎದುರು 6–2, 6–2ರಿಂದ ಗೆದ್ದರು. ರ‍್ಯಾಂಕಿಂಗ್‌ನಲ್ಲಿ 205ನೇ ಸ್ಥಾನ ಹೊಂದಿರುವ ಅಂಕಿತಾಗೆ 238ನೇ ಸ್ಥಾನದಲ್ಲಿರುವ ಮಿರ್ತಿಲೆ ಸರಿಸಾಟಿಯಾಗಲಿಲ್ಲ.

ಚೊಚ್ಚಲ ಗ್ರ್ಯಾನ್‌ಸ್ಲಾಂ ಟೂರ್ನಿ ಆಡುವ ಕನಸಿನೊಂದಿಗೆ ಕಣಕ್ಕೆ ಇಳಿದ ಕರ್ಮನ್ 0–6 ಮತ್ತು 5–7ರಿಂದ ಸೋತರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !