ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಎರಡನೇ ಸುತ್ತಿಗೆ ಬೆಲಿಂದಾ, ಒಸ್ತಾಪೆಂಕೊ

Last Updated 2 ಏಪ್ರಿಲ್ 2019, 19:16 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ರಾಯಿಟರ್ಸ್‌/ಎಎಫ್‌ಪಿ): ಸ್ವಿಟ್ಜರ್‌ಲೆಂಡ್‌ನ ಬೆಲಿಂದಾ ಬೆನ್‌ಸಿಕ್‌ ಮತ್ತು ಲಾತ್ವಿಯಾದ ಜೆಲೆನಾ ಒಸ್ತಾಪೆಂಕೊ ಅವರು ಡಬ್ಲ್ಯುಟಿಎ ಚಾರ್ಲ್ಸ್‌ಟನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಮಂಗಳವಾರ ನಡೆದ ಆರಂಭಿಕ ಸುತ್ತಿನ ಪೈಪೋಟಿಯಲ್ಲಿ ಒಂಬತ್ತನೇ ಶ್ರೇಯಾಂಕದ ಆಟಗಾರ್ತಿ ಬೆಲಿಂದಾ 6–3, 6–0 ನೇರ ಸೆಟ್‌ಗಳಿಂದ ಆಸ್ಟ್ರೇಲಿಯಾದ ಡೆಸ್ಟಾನೀ ಅಯಿವಾ ಅವರನ್ನು ಮಣಿಸಿದರು.

ಇನ್ನೊಂದು ಪಂದ್ಯದಲ್ಲಿ 10ನೇ ಶ್ರೇಯಾಂಕದ ಆಟಗಾರ್ತಿ ಜೆಲೆನಾ 6–1, 6–4ರಲ್ಲಿ ಸ್ವಿಡನ್‌ನ ಜೊಹಾನ್ನ ಲಾರ್ಸನ್‌ ಎದುರು ಗೆದ್ದರು.

ಇತರ ಪಂದ್ಯಗಳಲ್ಲಿ ಸಾರಾ ಸೊರಿಬಸ್‌ ಟೊರ್ಮೊ 6–0, 6–3ರಲ್ಲಿ ಫ್ಯಾನಿ ಸ್ಟಾಲರ್‌ ಎದುರೂ, ತಮಾರ ಜಿದಾನ್‌ಸೆಕ್‌ 1–6, 6–2, 6–0ರಲ್ಲಿ ಆ್ಯನಾ ಲೆನಾ ಫ್ರೀಡ್‌ಸಮ್‌ ಮೇಲೂ, ಶೆಲ್ಬಿ ರೋಜರ್ಸ್‌ 6–4, 6–2ರಲ್ಲಿ ಎವಜೆನಿಯಾ ರೊಡಿನ ವಿರುದ್ಧವೂ, ಮೋನಿಕಾ ಪುಯಿಗ್‌ 6–0, 6–1ರಲ್ಲಿ ಸಾರಾ ಎರಾನಿ ಮೇಲೂ, ಸೋಫಿಯಾ ಕೆನಿನ್‌ 7–5, 6–4ರಲ್ಲಿ ಸಬಿನ್‌ ಲಿಸಿಕಿ ಎದುರೂ, ಟೇಲರ್‌ ಟೌನ್‌ಸೆಂಡ್‌ 3–6, 6–2, 6–3ರಲ್ಲಿ ಆಸ್ತ್ರಾ ಶರ್ಮಾ ವಿರುದ್ಧವೂ, ಜೆಸ್ಸಿಕಾ ಪೆಗುಲಾ 1–6, 7–6, 6–1ರಲ್ಲಿ ಇರಿನಾ ಖ್ರೋಮಚೆವಾ ಮೇಲೂ ವಿಜಯಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT