ಟೆನಿಸ್‌: ಮೂರನೆ ಸುತ್ತಿಗೆ ಫೆಡರರ್‌

7

ಟೆನಿಸ್‌: ಮೂರನೆ ಸುತ್ತಿಗೆ ಫೆಡರರ್‌

Published:
Updated:
Deccan Herald

ಸಿನ್ಸಿನಾಟಿ: ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಅವರು ಎಟಿಪಿ ಸಿನ್ಸಿನಾಟಿ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯಲ್ಲಿ ಮೂರನೆ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಎರಡನೆ ಸುತ್ತಿನ ಹಣಾಹಣಿಯಲ್ಲಿ ಫೆಡರರ್‌ 6–4, 6–4ರ ನೇರ ಸೆಟ್‌ಗಳಿಂದ ಜರ್ಮನಿಯ ಪೀಟರ್‌ ಗೊಜೊವ್‌ಜಿಕ್‌ ಅವರನ್ನು ಪರಾಭವಗೊಳಿಸಿದರು.

ಗ್ರ್ಯಾನ್‌ಸ್ಲಾಮ್‌ನಲ್ಲಿ 20 ಪ್ರಶಸ್ತಿಗಳನ್ನು ಗೆದ್ದ ಹಿರಿಮೆ ಹೊಂದಿರುವ 37ರ ಹರೆಯದ ರೋಜರ್‌, ಎರಡು ಸೆಟ್‌ಗಳಲ್ಲೂ ಪ್ರಾಬಲ್ಯ ಮೆರೆದರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಲಿಯೊನಾರ್ಡೊ ಮೇಯರ್‌ 7–6, 6–4ರಲ್ಲಿ ಫ್ರಾನ್ಸ್‌ನ ಲುಕಾಸ್‌ ಪೌವಿಲ್ಲೆ ಎದುರೂ, ಕೆನಡಾದ ಡೆನಿಸ್‌ ಶಪೊವಲೊವ್‌ 6–4, 7–5ರಲ್ಲಿ ಕೈಲ್‌ ಎಡ್ಮಂಡ್‌ ವಿರುದ್ಧವೂ ಗೆದ್ದರು.

ಸೆರೆನಾಗೆ ಸೋಲು: ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಅಮೆರಿಕದ ಸೆರೆನಾ ವಿಲಿಯಮ್ಸ್‌ ಎರಡನೆ ಸುತ್ತಿನಲ್ಲಿ ಸೋತರು.

ಜೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ 6–3, 2–6, 6–3ರಿಂದ ಸೆರೆನಾ ಎದುರು ಗೆದ್ದರು.

ಇತರ ಪಂದ್ಯಗಳಲ್ಲಿ ಕ್ರಿಸ್ಟಿನಾ ಮ್ಲಾಡೆನೊವಿಚ್‌ 6–3, 6–0ರಲ್ಲಿ ವಿಕ್ಟೋರಿಯಾ ಕುಜಮೊವಾ ಎದುರೂ, ಕ್ಯಾರೋಲಿನಾ ಗಾರ್ಸಿಯಾ 6–4, 7–5ರಲ್ಲಿ ವಿಕ್ಟೋರಿಯಾ ಅಜರೆಂಕಾ ಮೇಲೂ, ಎಲಿನಾ ಸ್ವಿಟೋಲಿನಾ 7–6, 4–6, 6–4ರಲ್ಲಿ ಸ್ವೆಟ್ಲಾನ ಕುಜ್ನೆತ್ಸೋವಾ ವಿರುದ್ಧವೂ ವಿಜಯಿಯಾದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !