ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಸೆಮಿಫೈನಲ್‌ನಲ್ಲಿ ಅಲ್ಕರಾಜ್‌– ಸಿನ್ನರ್‌ ಸೆಣಸು

Published 15 ಮಾರ್ಚ್ 2024, 23:31 IST
Last Updated 15 ಮಾರ್ಚ್ 2024, 23:31 IST
ಅಕ್ಷರ ಗಾತ್ರ

ಇಂಡಿಯನ್‌ ವೆಲ್ಸ್, ಅಮೆರಿಕ: ಇಂಡಿಯನ್ ವೆಲ್ಸ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಕಾರ್ಲೊಸ್ ಅಲ್ಕರಾಜ್‌ ಅವರು ಯಾನಿಕ್‌ ಸಿನ್ನರ್‌ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಪೇನ್‌ನ ಆಟಗಾರ ಅಲ್ಕರಾಜ್‌ 6–3, 6–1 ರಿಂದ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಅವರನ್ನು ಮಣಿಸಿದರು. ಇನ್ನೊಂದು ಎಂಟರ ಘಟ್ಟದ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಆಟಗಾರ ಇಟಲಿಯ ಸಿನ್ನರ್ 6–3, 6–3 ರಿಂದ ಜೆಕ್‌ ರಿಪಬ್ಲಿಕ್‌ನ ಜಿರಿ ಲೆಹೆಕಾ ಎದುರು ಗೆದ್ದರು.

ಶನಿವಾರ ನಡೆಯಲಿರುವ ಇನ್ನೊಂದು ಸೆಮಿಫೈನಲ್‌ನಲ್ಲಿ ಅಮೆರಿಕದ ಟಾಮಿ ಪೌಲ್ ಮತ್ತು ರಷ್ಯಾದ ಡೇನಿಯೆಲ್‌ ಮೆಡ್ವೆಡೆವ್‌ ಎದುರಾಗುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT