ಪುಣೆ: ಉದಯೋನ್ಮುಖ ಆಟಗಾರ, ಭಾರತದ ಮಾನಸ್ ಧಾಮನೆ ಅವರು ಇಲ್ಲಿ ನಡೆಯುತ್ತಿರುವ ಟಾಟಾ ಓಪನ್ ಮಹಾರಾಷ್ಟ್ರ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋತರು. ಆದರೆ 15 ವರ್ಷದ ಆಟಗಾರ ತೋರಿದ ದಿಟ್ಟ ಆಟ ಗಮನಸೆಳೆಯಿತು.

ಸೋಮವಾರ ಆರಂಭವಾದ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸ್ಥಳೀಯ ಪ್ರತಿಭೆ ಮಾನಸ್ 2-6 4-6ರಿಂದ ಅಮೆರಿಕದ ಮೈಕೆಲ್ ಮೊಹ್ ಎದುರು ಸೋಲನುಭವಿಸಿದರು.

ವೈಲ್ಡ್ಕಾರ್ಡ್ ಪ್ರವೇಶ ಪಡೆದಿರುವ ಮಾನಸ್, ವಿಶ್ವ ಕ್ರಮಾಂಕದಲ್ಲಿ 115ನೇ ಸ್ಥಾನದಲ್ಲಿರುವ, ತನಗಿಂತ ದೈಹಿಕವಾಗಿ ಬಲಿಷ್ಠವಾಗಿರುವ ಆಟಗಾರನ ಎದುರು ಪ್ರಬುದ್ಧತೆಯ ಆಟ ತೋರಿದರು.

ರ್ಯಾಲಿಗಳಲ್ಲಿ ಸ್ವಲ್ಪ ಮಂಕಾದರೂ ಮಾನಸ್ ಅವರ ಕೆಲವು ಬ್ಯಾಕ್ಹ್ಯಾಂಡ್ ಮತ್ತು ಫೋರ್ಹ್ಯಾಂಡ್ ಹೊಡೆತಗಳು ಆಕರ್ಷಕವಾಗಿದ್ದವು.

‘ಇಂತಹ ಪೈಪೋಟಿಯನ್ನು ನಾನು ನಿರೀಕ್ಷಿಸಿರಲಿಲ್ಲ. ಮಾನಸ್ ಆಟ ಅಚ್ಚರಿ ತಂದಿತು. ಆತನಿಗೆ ಉತ್ತಮ ಭವಿಷ್ಯವಿದೆ‘ ಎಂದು ಪಂದ್ಯದ ನಂತರ 24 ವರ್ಷದ ಮೊಹ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.