ಶನಿವಾರ, ಏಪ್ರಿಲ್ 4, 2020
19 °C

ಡೆಲ್‌ರೆ ಬೀಚ್‌ ಓಪನ್ ಟೆನಿಸ್‌ ಟೂರ್ನಿ: ಕ್ವಾರ್ಟರ್‌ಗೆ ದಿವಿಜ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಫ್ಲೊರಿಡಾ: ಭಾರತದ ಡಬಲ್ಸ್‌ ವಿಭಾಗದ ಎರಡನೇ ರ‍್ಯಾಂಕಿನ ಆಟಗಾರ ದಿವಿಜ್‌ ಶರಣ್‌ ಅವರು ನ್ಯೂಜಿಲೆಂಡ್‌ನ ಅರ್ಟೆಮ್‌ ಸಿಟಾಕ್‌ ಜೊತೆಗೂಡಿ ಡೆಲ್‌ರೆ ಬೀಚ್‌ ಓಪನ್‌ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಕಾಲಿಟ್ಟಿದ್ದಾರೆ.

ಬುಧವಾರ ನಡೆದ ಪ್ರೀಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ 5–7, 6–4, 10–7ರಿಂದ ಸ್ವೀಡನ್‌ ಹಾಗೂ ಫ್ರಾನ್ಸ್‌ನ ಆ್ಯಂಡ್ರೆ ಗೊರಾನ್ಸನ್‌–ಉಗೊ ಹಂಬರ್ಟ್ ಎದುರು ಅವರು ಗೆದ್ದರು.

ಮೊದಲ ಸೆಟ್‌ನಲ್ಲಿ ಹಿನ್ನಡೆ ಕಂಡರೂ ಛಲದಿಂದ ಆಡಿದ ಭಾರತ–ಕಿವೀಸ್‌ ಜೋಡಿ, ಎರಡನೇ ಸೆಟ್‌ನಲ್ಲಿ ಶೇ. 75 ಸರ್ವ್‌ ಪಾಯಿಂಟ್ಸ್‌ಗಳನ್ನು ಗಳಿಸಿಕೊಂಡರು. ಟೈಬ್ರೇಕರ್‌ವರೆಗೆ ಸಾಗಿದ ಮೂರನೇ ಸೆಟ್‌ನಲ್ಲಿ 10–7ರಿಂದ ಗೆಲುವು ದಿವಿಜ್‌–ಸಿಟಾಕ್‌ ಅವರಿಗೆ ಒಲಿಯಿತು.

ಎಂಟರ ಘಟ್ಟದ ಹಣಾಹಣಿಯಲ್ಲಿ ದಿವಿಜ್‌–ಸಿಟಾಕ್‌ ಅವರು ಅಮೆರಿಕದ ಮೈಕ್‌ ಹಾಗೂ ಬಾಬ್‌ ಬ್ರಯಾನ್‌ ಅವರಿಗೆ ಮುಖಾಮುಖಿಯಾಗಲಿದ್ದಾರೆ.

ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಬಾಬ್‌ ಹಾಗೂ ಮೈಕ್‌ ಜೋಡಿಗೆ ವಾಕ್‌ಓವರ್‌ ಲಭಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು