ಶುಕ್ರವಾರ, ಮಾರ್ಚ್ 24, 2023
22 °C
ಅಮೆರಿಕ ಓಪನ್‌:ಎಡವಿದ ಬೋಪಣ್ಣ

ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ ಕ್ವಾರ್ಟರ್‌ಫೈನಲ್‌ಗೆ ಥೀಮ್‌

ಪಿಟಿಐ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌: ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಅಸ್ಟ್ರಿಯಾದ ಡಾಮಿನಿಕ್‌ ಥೀಮ್‌ ಹಾಗೂ ರಷ್ಯಾದ ಡೇನಿಯಲ್‌ ಮೆಡ್ವೆಡೆವ್‌ ಜಯದ ಓಟ ಮುಂದುವರಿಸಿದ್ದಾರೆ.

ಅರ್ಥರ್‌ ಆ್ಯಷ್‌ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪ್ರೀ ಕ್ವಾರ್ಟರ್‌ ಹಣಾಹಣಿಗಳಲ್ಲಿ ಥೀಮ್‌ ಅವರು 7–6, 6–1, 6–1ರಿಂದ ಫೆಲಿಕ್ಸ್‌ ಅಗರ್‌ ಅಲಿಯಾಸ್ಸಿಮ್‌ ಅವರ ಸವಾಲು ಮೀರಿದರೆ, ಮೆಡ್ವೆಡೆವ್‌ ಅವರು 6–4, 6–1, 6–0ರಿಂದ ಫ್ರಾನ್ಸಿಸ್‌ ಟಿಪೊಯ್‌ ಅವರನ್ನು ಪರಾಭವಗೊಳಿಸಿದರು.

ಇತರ ಪಂದ್ಯಗಳಲ್ಲಿ ಆ್ಯಂಡ್ರೆ ರುಬ್ಲೆವ್‌  4–6, 6–3, 6–3 6–3ರಿಂದ ಮ್ಯಾಟಿಯೊ ಬೆರೆಟ್ಟಿನಿ ಎದುರು, ಅಲೆಕ್ಸ್‌ ಡಿ ಮಿನೌರ್‌ ಅವರು 7–6, 6–3, 6–2ರಿಂದ ವಾಸೆಕ್‌ ಪಾಸ್ಪಿಲ್‌ ವಿರುದ್ಧ ಗೆದ್ದು ಎಂಟರಘಟ್ಟಕ್ಕೆ ಮುನ್ನಡೆದರು.

ಸೆರೆನಾ, ಅಜರೆಂಕಾ ಗೆಲುವಿನ ಅಭಿಯಾನ: ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್ 6–3, 6–7, 6–3ರಿಂದ ಮರಿಯಾ ಸಕ್ಕಾರಿ ಅವರನ್ನು ಮಣಿಸಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು. ಇನ್ನೊಂದು ಪಂದ್ಯದಲ್ಲಿ ವಿಕ್ಟೋರಿಯಾ ಅಜರೆಂಕಾ ಅವರು 5–7, 6–1, 6–4ರಿಂದ ಕರೋಲಿನಾ ಮುಚೊವಾ ವಿರುದ್ಧ ಗೆದ್ದರು.

ಬೋಪಣ್ಣ ಜೋಡಿಗೆ ಸೋಲು: ಟೂರ್ನಿಯಲ್ಲಿ‌ ಭಾರತದ ಸವಾಲು ಅಂತ್ಯವಾಗಿದೆ. ಏಕೈಕ ಭರವಸೆಯಾಗಿದ್ದ ರೋಹನ್‌ ಬೋಪಣ್ಣ ಹಾಗೂ ಅವರ ಜೊತೆಗಾರ ಕೆನಡಾದ ಡೆನಿಸ್‌ ಶಪೊವಲೊವ್‌ ಪುರುಷರ ಡಬಲ್ಸ್ ಕ್ವಾರ್ಟರ್‌ಫೈನಲ್‌ ಸೋಲು ಅನುಭವಿಸಿದ್ದಾರೆ.

ಬೋಪಣ್ಣ–ಶಪೊವಲೊವ್‌ ಅವರು 5–7, 5–7ರಿಂದ ನೆದರ್ಲೆಂಡ್ಸ್‌ನ ಜೀನ್‌ ಜೂಲಿಯನ್ ರೋಜರ್‌ ಹಾಗೂ ರುಮೇನಿಯಾದ ಹೊರಿಯಾ ಟೆಕಾವು ಜೋಡಿಯ ಎದುರು ಪರಾಭವಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು