ಟೆನಿಸ್‌: ಭಾರತ–ಥಾಯ್ಲೆಂಡ್‌ ಪೈಪೋಟಿ

7

ಟೆನಿಸ್‌: ಭಾರತ–ಥಾಯ್ಲೆಂಡ್‌ ಪೈಪೋಟಿ

Published:
Updated:
Prajavani

ಅಸ್ತಾನ, ಕಜಕಸ್ತಾನ: ಫೆಡ್‌ ಕಪ್‌ ಟೆನಿಸ್‌ ಟೂರ್ನಿಯಲ್ಲಿ ವಿಶ್ವ ಗುಂಪು–2ಕ್ಕೆ ಅರ್ಹತೆ ಗಳಿಸುವ ಕನಸು ಹೊಂದಿರುವ ಭಾರತ ಮಹಿಳಾ ತಂಡ ಈ ಹಾದಿಯಲ್ಲಿ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.

ಗುರುವಾರ ನಡೆಯುವ ಏಷ್ಯಾ ಒಸೀನಿಯಾ ಗುಂ‍ಪು–1ರ ತನ್ನ ಮೊದಲ ಹೋರಾಟದಲ್ಲಿ ಭಾರತ ತಂಡ ಥಾಯ್ಲೆಂಡ್‌ ಎದುರು ಸೆಣಸಲಿದೆ. ಶುಕ್ರವಾರ ನಡೆಯುವ ಹಣಾಹಣಿಯಲ್ಲಿ ಭಾರತಕ್ಕೆ ಬಲಿಷ್ಠ ಕಜಕಸ್ತಾನ ತಂಡದ ಸವಾಲು ಎದುರಾಗಲಿದೆ.

ಅಂಕಿತಾ ರೈನಾ ಮತ್ತು ಕರ್ಮನ್‌ಕೌರ್‌ ಥಾಂಡಿ ಅವರು ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಶಕ್ತಿಯಾಗಿದ್ದಾರೆ. ಇವರು ಥಾಯ್ಲೆಂಡ್‌ ತಂಡದ ಪೀಂಗ್‌ತರನ್‌ ಪ್ಲಿಪುಯೆಚ್‌ ಮತ್ತು ಪುನ್ನಿನ್‌ ಕೊವಾಪಿಟುಕ್ಟೆಡ್‌ ಅವರನ್ನು ಸುಲಭವಾಗಿ ಸೋಲಿಸುವ ಹುಮ್ಮಸ್ಸಿನಲ್ಲಿದ್ದಾರೆ.

‘ಹಿಂದಿನ ನಾಲ್ಕು ದಿನಗಳಿಂದ ಕಠಿಣ ಅಭ್ಯಾಸ ನಡೆಸಿದ್ದೇವೆ. ಅಂಕಿತಾ ಮತ್ತು ಕರ್ಮನ್‌ಕೌರ್‌ ಉತ್ತಮ ಲಯದಲ್ಲಿದ್ದಾರೆ. ಥಾಯ್ಲೆಂಡ್‌ ತಂಡದಲ್ಲಿರುವ ಸಿಂಗಲ್ಸ್‌ ವಿಭಾಗದ ಆಟಗಾರ್ತಿಯರು ರ‍್ಯಾಂಕಿಂಗ್‌ನಲ್ಲಿ ನಮ್ಮ ಆಟಗಾರ್ತಿಯರಿಗಿಂತಲೂ ಕೆಳಗಿನ ಸ್ಥಾನ ಹೊಂದಿದ್ದಾರೆ. ಹಾಗಂತ ಆ ತಂಡವನ್ನು ಹಗುರವಾಗಿ ಪರಿಗಣಿಸುವುದಿಲ್ಲ’ ಎಂದು ಭಾರತ ತಂಡದ ಕೋಚ್‌ ಅಂಕಿತಾ ಭಾಂಬ್ರಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !