ಮಂಗಳವಾರ, ಫೆಬ್ರವರಿ 7, 2023
27 °C

ಜಪಾನ್ ಓಪನ್‌ ಟೆನಿಸ್‌ ಟೂರ್ನಿ: ಅಮೆರಿಕದ ಟೇಲರ್ ಫ್ರಿಟ್ಜ್‌ ಚಾಂಪಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ (ಎಎಫ್‌ಪಿ): ಅಮೆರಿಕದ ಟೇಲರ್ ಫ್ರಿಟ್ಜ್‌ ಅವರು ಇಲ್ಲಿ ನಡೆದ ಜಪಾನ್ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು.

ಭಾನುವಾರ ನಡೆದ ಫೈನಲ್‌ನಲ್ಲಿ ಅವರು ತಮ್ಮ ಗೆಳೆಯ ಹಾಗೂ ಅಮೆರಿಕದವರೇ ಆದ ಫ್ರಾನ್ಸೆಸ್‌ ಟೈಫೊ ಅವರನ್ನು 7-6 (7/3), 7-6 (7/2) ರಲ್ಲಿ ಮಣಿಸಿದರು.

ಪ್ರಬಲ ಪೈಪೋಟಿ ನಡೆದ ಪಂದ್ಯದ ಎರಡೂ ಸೆಟ್‌ಗಳು ಟೈಬ್ರೇಕರ್‌ನಲ್ಲಿ ಕೊನೆಗೊಂಡವು. ಈ ಗೆಲುವಿನ ಮೂಲಕ ಫ್ರಿಟ್ಜ್‌ ಅವರು ಇದೇ ಮೊದಲ ಬಾರಿ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಅಗ್ರ 10 ರಲ್ಲಿ ಕಾಣಿಸಿಕೊಂಡಿದ್ದು, ಎಂಟನೇ ಸ್ಥಾನ ಪಡೆದಿದ್ದಾರೆ.

ಅಮೆರಿಕದ ಆಟಗಾರನೊಬ್ಬ ಜಪಾನ್‌ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದು 26 ವರ್ಷಗಳ ಬಳಿಕ ಇದೇ ಮೊದಲು. 1996 ರಲ್ಲಿ ಪೀಟ್‌ ಸಾಂಪ್ರಾಸ್‌ ಇಲ್ಲಿ ಕೊನೆಯದಾಗಿ ಚಾಂಪಿಯನ್‌ ಆಗಿದ್ದರು.

‘ಟೈಫೊ ನನ್ನ ನೆಚ್ಚಿನ ಗೆಳೆಯ. ಕಳೆದ ಕೆಲವು ವಾರಗಳಲ್ಲಿ ನಾವು ಹೆಚ್ಚಿನ ಸಮಯವನ್ನು ಜತೆಯಾಗಿ ಕಳೆದಿದ್ದೆವು. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಮುಖ ಪಂದ್ಯಗಳಲ್ಲಿ ನಾವು ಪರಸ್ಪರ ಪೈಪೋಟಿ ನಡೆಸುವುದು ಖಚಿತ’ ಎಂದು ಫ್ರಿಟ್ಜ್‌ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.

ಇತ್ತೀಚೆಗೆ ನಡೆದ ಲೇವರ್‌ ಕಪ್‌ ಟೂರ್ನಿಯಲ್ಲಿ ಇವರಿಬ್ಬರು ವಿಶ್ವ ತಂಡದಲ್ಲಿ ಜತೆಯಾಗಿ ಆಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು