ಹಲೆಪ್‌ಗೆ ಕ್ಲೀಂಪಟ್ ಕೋಚ್

ಕತಾರ್: ರುಮೇನಿಯಾದ ಟೆನಿಸ್ ಆಟಗಾರ್ತಿ ಸಿಮೊನಾ ಹಲೆಪ್ ಅವರು ಬೆಲ್ಜಿಯಂ ದೇಶದ ಥಿಯೆರಿ ವ್ಯಾನ್ ಕ್ಲೀಂಪಟ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿಕೊಂಡಿದ್ದಾರೆ.
ಮುಂದಿನ ವಾರ ನಡೆಯುವ ಕತಾರ್ ಓಪನ್‌ನಲ್ಲಿ ಕ್ಲೀಂಪಟ್ ಅವರು ಸಿಮೊನಾಗೆ ಮಾರ್ಗದರ್ಶನ ನೀಡಲಿದ್ದಾರೆ.
ಈ ಮೊದಲು ಕೋಚ್ ಆಗಿದ್ದ ಆಸ್ಟ್ರೇಲಿಯಾದ ಡರೆನ್ ಕಾಹಿಲ್ ಅವರು ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯಬೇಕೆಂಬ ಕಾರಣ ನೀಡಿ ಸಿಮೊನಾ ಜೊತೆಗಿನ ಒಪ್ಪಂದವನ್ನು ರದ್ದು ಮಾಡಿದ್ದರು. ಹೀಗಾಗಿ ರುಮೇನಿಯಾದ ಆಟಗಾರ್ತಿ ಈ ವರ್ಷದ ಕೆಲ ಟೂರ್ನಿಗಳಲ್ಲಿ ಕೋಚ್ ಇಲ್ಲದೆಯೇ ಭಾಗವಹಿಸಲು ತೀರ್ಮಾನಿಸಿದ್ದರು. ಆಸ್ಟ್ರೇಲಿಯಾ ಓಪನ್ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಸೆರೆನಾ ವಿಲಿಯಮ್ಸ್ ಎದುರು ಸೋತಿದ್ದ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಳೆದುಕೊಂಡಿದ್ದರು. ಹೀಗಾಗಿ ಈಗ ಕೋಚ್ ನೇಮಿಸಿಕೊಂಡಿದ್ದಾರೆ.
ಕ್ಲೀಂಪಟ್ ಅವರು 2014ರಿಂದ ಈ ಬಾರಿಯ ಆಸ್ಟ್ರೇಲಿಯಾ ಓಪನ್‌ವರೆಗೆ ಸಿಂಗಲ್ಸ್ ವಿಭಾಗದ ಆಟಗಾರ ಡೇವಿಡ್ ಗೊಫಿನ್ ಅವರ ಮಾರ್ಗದರ್ಶಕರಾಗಿದ್ದರು. 1993ರಿಂದ 1997ರ ವರೆಗೆ ಒಲಿವರ್ ರೋಚಸ್‌ಗೆ ತರಬೇತಿ ನೀಡಿದ್ದರು.
ಹಲೆಪ್ ಅವರು ಈ ವಾರ ನಡೆಯುವ ಜೆಕ್ ಗಣರಾಜ್ಯ ಎದುರಿನ ಫೆಡ್ ಕಪ್ ಪಂದ್ಯದಲ್ಲಿ ರುಮೇನಿಯಾ ಪರ ಕಣಕ್ಕಿಳಿಯಲಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.