ಶನಿವಾರ, ಸೆಪ್ಟೆಂಬರ್ 18, 2021
27 °C

ಹ್ಯಾಲೆ ಟೂರ್ನಿ: ಜ್ವೆರೆವ್‌ಗೆ ಸೋಲು

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಹ್ಯಾಲೆ ವೆಸ್ಟ್‌ಫಾಲನ್‌, ಜರ್ಮನಿ: ವಿಶ್ವ ಕ್ರಮಾಂಕದಲ್ಲಿ ಐದನೇ ಸ್ಥಾನದಲ್ಲಿರುವ ಅಲೆಕ್ಸಾಂಡರ್‌ ಜ್ವೆರೆವ್‌ ಹ್ಯಾಲೆ ಎಟಿಪಿ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಸೋತರು.

ಬೆಲ್ಜಿಯಂನ ಡೇವಿಡ್‌ ಗಫಿನ್‌ ವಿರುದ್ಧ 6–3, 1–6, 6–7 (3/7) ಸೆಟ್‌ಗಳಿಂದ ಅವರು ಮಣಿದರು.

22 ವರ್ಷದ ಜ್ವೆರೆವ್‌ ಅವರು ಒಂಬತ್ತು ಡಬಲ್‌ ಫಾಲ್ಟ್ ಮಾಡಿದರು. ಮೂರನೇ ಸೆಟ್‌ನಲ್ಲಿ ಎರಡು ಪಾಯಿಂಟ್‌ಗಳನ್ನು ಉಳಿಸಿಕೊಂಡರೂ ಟೈಬ್ರೇಕರ್‌ನಲ್ಲಿ ಅಂತಿಮವಾಗಿ ಸೋತರು. ಕಳೆದ ವಾರ ನಡೆದ ಸ್ಟಟ್‌ಗರ್ಟ್‌ ಓಪನ್‌ ಟೂರ್ನಿಯಿಂದಲೂ ಅವರು ಆರಂಭದಲ್ಲೇ ಹೊರಬಿದ್ದಿದ್ದರು. ತಮ್ಮದೇ ದೇಶದ ಡಸ್ಟಿನ್‌ ಬ್ರೌನ್‌ ಎದುರು ಮುಗ್ಗರಿಸಿದ್ದರು.

ವಿಂಬಲ್ಡ್ನ್‌ ಟೂರ್ನಿಗೆ ಮೊದಲು ಜ್ವೆರೆವ್‌ ಲಯ ಕಂಡುಕೊಳ್ಳಬೇಕಿದೆ.ಶನಿವಾರ ನಡೆಯುವ ಸೆಮಿಫೈನಲ್‌ ಪಂದ್ಯದಲ್ಲಿ ಇಟಲಿಯ ಮ್ಯಾಟಿಯೊ ಬೆರೆಟ್ಟಿನಿ ಅವರನ್ನು ಗಫಿನ್‌ ಎದುರಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು