ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ನಾಲ್ವರು ಶ್ರೇಯಾಂಕ ಆಟಗಾರ್ತಿಯರ ನಿರ್ಗಮನ

Published 24 ನವೆಂಬರ್ 2023, 0:24 IST
Last Updated 24 ನವೆಂಬರ್ 2023, 0:24 IST
ಅಕ್ಷರ ಗಾತ್ರ

ಬೆಂಗಳೂರು: ಅಗ್ರ ಶ್ರೇಯಾಂಕದ ಆಟಗಾರ್ತಿ ನಿಗಿನಾ ಅಬ್ದುರೈಮೋವಾ ಅವರಿಗೆ ನೇರ ಸೆಟ್‌ಗಳಲ್ಲಿ ಸೋಲಿನ ಆಘಾತ ನೀಡಿದ ಭಾರತದ ಝೀಲ್ ದೇಸಾಯಿ ತಮ್ಮ ವೃತ್ತಿ ಬದುಕಿನಲ್ಲೇ ಬಹುದೊಡ್ಡ ಗೆಲುವನ್ನು ಸಂಪಾದಿಸಿದರು. ಬೌರಿಂಗ್ ಇನ್‌ಸ್ಟಿಟ್ಯೂಟ್‌ ಐಟಿಎಫ್‌ ಮಹಿಳಾ ವಿಶ್ವ ಟೆನಿಸ್‌ ಟೂರ್‌ನಲ್ಲಿ ಗುರುವಾರ ನಿಗಿನಾ ಸೇರಿದಂತೆ ನಾಲ್ವರು ಶ್ರೇಯಾಂಕ ಆಟಗಾರ್ತಿಯರು ಪ್ರಿಕ್ವಾರ್ಟರ್‌ಫೈನಲ್ ಹಂತದಲ್ಲೇ ಹೊರಬಿದ್ದರು.

ಝೀಲ್‌ ಜೊತೆ ಭಾರತದ ಇನ್ನಿಬ್ಬರು ಆಟಗಾರ್ತಿ ಯರು– ಶ್ರೀವಲ್ಲಿ ರಶ್ಮಿಕಾ ಭಮಿಡಿಪಾಟಿ ಮತ್ತು ವೈಷ್ಣವಿ ಅಡ್ಕರ್– ಅವರೂ ತಮಗಿಂತ ಪ್ರಬಲ ಎದುರಾಳಿಗಳ ವಿರುದ್ಧ ಜಯಗಳಿಸಿ ಎಂಟರ ಘಟ್ಟಕ್ಕೆ ಕಾಲಿಟ್ಟರು.

ಅಹಮದಾಬಾದ್‌ನ ಝೀಲ್ ದೇಸಾಯಿ 6–4, 6–4 ರಿಂದ ಉಜ್ಬೇಕಿಸ್ತಾನದ ಆಟಗಾರ್ತಿಯನ್ನು ಹಿಮ್ಮೆಟ್ಟಿಸಿದರು. 21 ವರ್ಷದ ರಶ್ಮಿಕಾ ಇನ್ನೊಂದು ಪಂದ್ಯದಲ್ಲಿ ಹಿನ್ನಡೆಯಿಂದ ಚೇತರಿಸಿ, ತಮ್ಮ ಡಬಲ್ಸ್‌ ಜೊತೆಗಾತಿ ವೈದೇಹಿ ಚೌಧರಿ ಅವರನ್ನು 4–6, 7–5, 7–5 ರಿಂದ ಸೋಲಿಸಿದರು. ವೈದೇಹಿ ಈ ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿದ್ದಾರೆ. ಆಪ್ತ ಸ್ನೇಹಿತೆಯರ ಈ ಹಣಾಹಣಿ 178 ನಿಮಿಷ ನಡೆಯಿತು.

ವೈಷ್ಣವಿ 6–3, 7–6 (7–1)ರಿಂದ 8ನೇ ಶ್ರೇಯಾಂಕದ ಪುನ್ನಿನ್ ಕೊವಾಪಿಟುಕ್ಟೆಡ್ (ಥಾಯ್ಲೆಂಡ್‌) ಅವರನ್ನು ಸೋಲಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. ಆರನೇ ಶ್ರೆಯಾಂಕದ ಜೆನ್ನಿ ಡುರ್ಸ್ಟ್‌ (ಸ್ವಿಜರ್ಲೆಂಡ್‌) ಅವರೂ 3–6, 4–6 ರಲ್ಲಿ ಜರ್ಮನಿಯ ಅಂಟೋನಿಯಾ ಶ್ಮಿಡ್ ಎದುರು  ಅನಿರೀಕ್ಷಿತ ಸೋಲನುಭವಿಸಿದರು.

ಮೂರನೇ ಶ್ರೇಯಾಂಕದ ಋತುಜಾ ಭೋಸಲೆ ಇನ್ನೊಂದು ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಪ್ರಾಂಜಲಾ ಯಡ್ಲಪಲ್ಲಿ ಅವರನ್ನು 6–4, 6–3 ರಿಂದ ಸೋಲಿಸಿದರು. ದ್ವಿತೀಯ ಶ್ರೇಯಾಂಕದ ಲನ್ಲಾನಾ ತರಾರುದಿ (ಥಾಯ್ಲೆಂಡ್‌) ಅವರು 6–1, 6–1 ರಿಂದ ಭಾರತದ ಸುಹಿತಾ ಮರೂರು ಅವರನ್ನು ಹಿಮ್ಮೆಟ್ಟಿಸಿದರು. ಐದನೇ ಶ್ರೇಯಾಂಕದ ಝಿಬೆಕ್ ಕುಲಂಬಯೇವಾ (ಕಜಕಸ್ತಾನ) ಅವರು 6–1, 6–3 ರಿಂದ ಕ್ವಾಲಿಫೈರ್ ಪೂಜಾ ಇಂಗಳೆ ಮೇಲೆ 6–1, 6–3ರಲ್ಲಿ ಜಯಗಳಿಸಿದರು.

ಡಬಲ್ಸ್‌: ಡಬಲ್ಸ್‌ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಅಗ್ರ ಶ್ರೇಯಾಂಕದ ರುತುಜಾ ಭೋಸಲೆ– ಝಿಬೆಕ್ ಕುಲುಂಬಯೇವಾ 6–2, 6–0 ಯಿಂದ ಪೂಜಾ– ಸಂದೀಪ್ತಿ ಸಿಂಗ್ ರಾವ್ ಅವರನ್ನು, ಮೂರನೇ ಶ್ರೇಯಾಂಕದ ಶ್ರೀವಲ್ಲಿ ರಶ್ಮಿಕಾ– ವೈದೇಹಿ ಚೌಧರಿ 6–0, 6–3 ರಿಂದ ಕಶಿಶ್‌ ಭಟಿಯಾ–ವನ್ಶಿತಾ– ಪಟಾನಿಯಾ ಅವರನ್ನು ಸೋಲಿಸಿದರು.

ಎರಡನೇ ಶ್ರೇಯಾಂಕದ ಜೆನ್ನಿ ಡುರ್ಸ್ಟ್/ ಎಕಟೆರಿನಾ ಯಶಿನಾ ಮತ್ತು ಡಿಲೆಟ್ಟಾ ಚೆರುಬಿನಿ (ಇಟಲಿ)/ ಅಂಟಾನಿಯಾ ಸ್ಮಿಟ್‌ ನಡುವಣ ಪಂದ್ಯವನ್ನು ಮಬ್ಬು ಕವಿದ ಕಾರಣ ಮುಂದೂಡಲಾಯಿತು. ಪುನ್ನಿನ್ / ಅನ್ನಾ ಉರೆಕೆ ಮತ್ತು ಸಾಯಿ ಸಂಹಿತಾ/ ಸೋಹಾ ಸಾದಿಕ್ ಜೋಡಿ ನಡುವಣ ಪಂದ್ಯವೂ ಮುಂದಕ್ಕೆ ಹೋಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT