ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಟಿ: ಸತ್ಯನ್‌ಗೆ ಜಯ

Last Updated 24 ಏಪ್ರಿಲ್ 2019, 19:47 IST
ಅಕ್ಷರ ಗಾತ್ರ

ಬುಡಾಪೆಸ್ಟ್(ಪಿಟಿಐ): ಭಾರತದ ಸತ್ಯನ್‌ ಜ್ಞಾನಶೇಖರನ್‌ ಇಲ್ಲಿ ನಡೆಯುತ್ತಿರುವ ಐಐಟಿಎಫ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಜಯ ಸಾಧಿಸಿದ್ದಾರೆ.

ಬುಧವಾರ ನಡೆದ ಪಂದ್ಯ ದಲ್ಲಿಸತ್ಯನ್‌ ಅವರು11–5, 11–9, 6–11, 11–7, 11–6 ರಿಂದರೋಮಾನಿಯಾದಕ್ರಿಸ್ಟಿನ್ ಪ್ಲೆಟೀ ವಿರುದ್ಧ ಗೆದ್ದರು.

ಸತ್ಯನ್ ಹೊರತುಪಡಿಸಿ ಮಿಕ್ಕ ಎಲ್ಲರು ನಿರಾಸೆ ಪಡಬೇಕಾಯಿತು. ಶರತ್‌ ಕಮಲ್‌ 9–11, 10–12, 11–8, 4–11, 9–11ರಲ್ಲಿ ಕ್ರೊವೇಷ್ಯಾದ ಟೊಮಿಸ್ಲಾವ್ ಪುಕಾರ್‌ ಅವರಿಗೆ ಮಣಿದರು. ಮನವ್‌ ತಕ್ಕರ್‌ ಅವರು ಆಸ್ಟ್ರಿಯಾದ ರಾಬರ್ಟ್ ಗಾರ್ದೋಸ್ ಅವರಿಗೆ13-11, 6-11, 11-8, 11-3, 2-11, 10-12, 6-11ರಿಂದ ಸೋತರು. ಮಹಿಳೆಯ ಸಿಂಗಲ್ಸ್‌ನಲ್ಲಿಮಣಿಕಾ ಬಾತ್ರಾ ಅವರು 11-2, 11-8, 7-11, 11-7, 11-9ರಲ್ಲಿ ತೈವಾನ್‌ನ ಜೆನ್‌ ಜೂ ಯು ಅವರಿಗೆ ಶರಣಾದರು.

ಡಬಲ್ಸ್‌ನಲ್ಲಿ ಜಪಾನ್‌ನ ಹಶಿಮೊಟೊ ಹೊನಕಾ ಮತ್ತು ಹಿತೊಮಿ ಸಾಟೊ ಅವರು 11-6, 11-4, 7-11, 11-7, 11-8ರಲ್ಲಿ ಮಣಿಕಾ ಬಾತ್ರ, ಅರ್ಚನಾ ಕಾಮತ್‌ ಜೋಡಿಯನ್ನು ಸೋಲಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಸತ್ಯನ್‌, ಅರ್ಜನಾ ಕಾಮತ್‌ ಜೋಡಿ ದಕ್ಷಿಣ ಕೊರಿಯಾದ ಲೀ ಸಾಂಗ್ಸೂ, ಜಿಹೀ ಜಿಯಾನ್‌ ಅವರಿಗೆ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT