200ನೇ ಸ್ಥಾನದಲ್ಲಿ ಕರ್ಮನ್‌ ಕೌರ್‌

7

200ನೇ ಸ್ಥಾನದಲ್ಲಿ ಕರ್ಮನ್‌ ಕೌರ್‌

Published:
Updated:

ನವದೆಹಲಿ: ಭಾರತದ ಟೆನಿಸ್‌ ಕರ್ಮನ್‌ ಕೌರ್‌ ಥಂಡಿ ಅವರು ಡಬ್ಲ್ಯುಟಿಎ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರ ಇನ್ನೂರರಲ್ಲಿ ಸ್ಥಾನ ‍ಪಡೆದಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ ಭಾರತದ ಆರನೇ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. 

ಕರ್ಮನ್‌ ಅವರು ಇತ್ತೀಚೆಗೆ ಹಾಂಕಾಂಗ್‌ನಲ್ಲಿ ನಡೆದ ಐಟಿಎಫ್‌ ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದರು. ಇದರಿಂದಾಗಿ ಅವರು 32 ಸ್ಥಾನಗಳ ಬಡ್ತಿ ಹೊಂದಿದ್ದಾರೆ. ಸದ್ಯ, ಅವರು ರ‍್ಯಾಂಕಿಂಗ್‌ ಪಟ್ಟಿಯಲ್ಲಿ 200ನೇ ಸ್ಥಾನದಲ್ಲಿದ್ದಾರೆ. ಭಾರತದ ಇನ್ನೊಬ್ಬ ಆಟಗಾರ್ತಿ ಅಂಕಿತಾ ರೈನಾ 195ನೇ ಸ್ಥಾನದಲ್ಲಿದ್ದಾರೆ.  

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !