ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಓಪನ್: ಕರ್ಬರ್‌ಗೆ ಗೆಲುವು

Last Updated 31 ಆಗಸ್ಟ್ 2020, 18:12 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಏಳು ತಿಂಗಳ ನಂತರ ಕಣಕ್ಕೆ ಇಳಿದ ಮಾಜಿ ಚಾಂಪಿಯನ್ ಏಂಜಲಿಕ್ ಕರ್ಬರ್ ಸೋಮವಾರ ಆರಂಭಗೊಂಡ ಅಮೆರಿಕ ಓಪನ್ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಜಯ ಗಳಿಸಿದರು. ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ನಡೆಯುತ್ತಿರುವ ಟೂರ್ನಿಯ ಪಂದ್ಯದಲ್ಲಿ ಅವರು ಆಸ್ಟ್ರೇಲಿಯಾದ ಅಜಲಾ ತೊಲ್ಜನೊವಿಚ್ ಅವರನ್ನು 6–4, 6–4ರಲ್ಲಿ ಮಣಿಸಿದರು.

17ನೇ ಶ್ರೇಯಾಂಕಿತೆಯಾಗಿರುವ ಜರ್ಮನಿಯ ಏಂಜಲಿಕ್ ಕೋವಿಡ್ ಕಾಟಕ್ಕೂ ಮೊದಲು ನಡೆದ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಹೊರಬಿದ್ದಿದ್ದರು. ಲೂಯಿಸ್ ಆರ್ಮ್‌ಸ್ಟ್ರಾಂಗ್ ಕ್ರೀಡಾಂಗಣದಲ್ಲಿ ಆರಂಭದಲ್ಲಿ ಕೊಂಚ ಹಿನ್ನಡೆ ಅನುಭವಿಸಿದರು. ಮೊದಲ ನಾಲ್ಕು ಗೇಮ್‌ಗಳನ್ನು ಬಿಟ್ಟುಕೊಟ್ಟರೂ ನಂತರ ಚೇತರಿಸಿಕೊಂಡರು. ಮೂರು ಬ್ರೇಕ್ ಪಾಯಿಂಟ್‌ಗಳನ್ನು ತಮ್ಮ ಪರವಾಗಿಸಿದ ಅವರು 5–4ರ ಮುನ್ನಡೆ ಸಾಧಿಸಿದರು. ನಂತರ ಸುಲಭವಾಗಿ ಮೊದಲ ಸೆಟ್ ತಮ್ಮದಾಗಿಸಿಕೊಂಡರು. ಎರಡನೇ ಸೆಟ್‌ನಲ್ಲೂ ಎದುರಾಳಿಯನ್ನು ಕಂಗೆಡಿಸಿದ ಅವರು 88 ನಿಮಿಷಗಳಲ್ಲಿ ಪಂದ್ಯ ಗೆದ್ದುಕೊಂಡರು.

ಮತ್ತೊಂದು ಪಂದ್ಯದಲ್ಲಿ ಕರೊಲಿನಾ ಪ್ಲಿಸ್ಕೋವ ಅವರು ಅನೆಲಿನಾ ಕರೆಲಿನಾ ಎದುರು 6–4, 6–0ಯಿಂದ ಜಯ ಗಳಿಸಿದರು.

ಪುರುಷರ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ಪಾಬ್ಲೊ ಆಂಡುಜರ್ ಎದುರು ಕ್ರೊವೇಷ್ಯಾದ ಬೋರ್ನಾ ಕೋರಿಕ್ 7–6, 6–3, 6–1ರಿಂದ ಗೆದ್ದರು. ಬೆಲಾರಸ್‌ನ ಐಗರ್ ಜೆರಸಿಮೊವ್ 6–1, 4–6, 6–4, 6–4ರಲ್ಲಿ ಸರ್ಬಿಯಾದ ದುಸಾನ್ ಲಾಜೋವಿಚ್ ವಿರುದ್ಧ ಜಯ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT