7
ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಎರಡನೇ ಸುತ್ತಿಗೆ ಜ್ವೆರೆವ್‌

ಮುಗುರುಜಾ ಶುಭಾರಂಭ

Published:
Updated:
ಸ್ಪೇನ್‌ನ ಗಾರ್ಬೈನ್ ಮುಗುರುಜಾ ಚೆಂಡನ್ನು ಹಿಂತಿರುಗಿಸಲು ಮುಂದಾದರು ಎಎಫ್‌ಪಿ ಚಿತ್ರ

ಲಂಡನ್‌: ಹಾಲಿ ಚಾಂಪಿಯನ್‌ ಗಾರ್ಬೈನ್‌ ಮುಗುರುಜಾ ಅವರು ವಿಂಬಲ್ಡನ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಹಣಾಹಣಿಯಲ್ಲಿ ಮುಗುರುಜಾ 6–2, 7–5ರಲ್ಲಿ ನವೊಮಿ ಬ್ರಾಡಿ ಅವರನ್ನು ಸೋಲಿಸಿದರು.

ಸ್ಪೇನ್‌ನ ಆಟಗಾರ್ತಿ ಮುಗುರುಜಾ ಮೊದಲ ಸೆಟ್‌ನಲ್ಲಿ ನಿರಾಯಾಸವಾಗಿ ಎದುರಾಳಿಯ ಸವಾಲು ಮೀರಿದರು. ಎರಡನೇ ಸೆಟ್‌ನಲ್ಲಿ ಪ್ರಬಲ ಸ್ಪರ್ಧೆ ಒಡ್ಡಿದ ಬ್ರಾಡಿ 5–5ರಲ್ಲಿ ಸಮಬಲ ಸಾಧಿಸಿದರು. ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಹೊಂದಿರುವ ಮುಗುರುಜಾ ನಂತರದ ಎರಡು ಗೇಮ್‌ಗಳಲ್ಲೂ ಮಿಂಚಿನ ಆಟ ಆಡಿ ಪಂದ್ಯ ಗೆದ್ದರು.

ಇನ್ನೊಂದು ಪಂದ್ಯದಲ್ಲಿ ಜರ್ಮನಿಯ ಏಂಜಲಿಕ್‌ ಕೆರ್ಬರ್‌ 7–5, 6–3ರಲ್ಲಿ ರಷ್ಯಾದ ವೆರಾ ಜ್ವೊನಾರೆವಾ ಅವರನ್ನು ಮಣಿಸಿದರು.

ಇತರ ಪಂದ್ಯಗಳಲ್ಲಿ ಕ್ಲೈರಾ ಲಿಯು 6–2, 6–7, 6–3ರಲ್ಲಿ ಅನಾ ಕೊಂಜುಹ್ ಎದುರೂ, ಆ್ಯಷ್ಲೆಗ್‌ ಬಾರ್ಟಿ 7–5, 6–3ರಲ್ಲಿ ಸ್ಟೆಫಾನಿ ವೊಗೆಲ್ ಮೇಲೂ, ಅನೆಟ್‌ ಕೊಂಥಾವೀಟ್‌ 6–2, 6–2ರಲ್ಲಿ ಡೆನಿಶಾ ಅಲ್ಲೆರ್ಟೊವಾ ವಿರುದ್ಧವೂ, ಸಮಂತಾ ಸೊಸುರ್‌ 6–4, 7–5ರಲ್ಲಿ ಪೆಂಗ್‌ ಶೂಯಿ ಎದುರೂ, ಡೇರಿಯಾ ಗ್ಯಾವರಿಲೋವ 6–2, 6–3ರಲ್ಲಿ ಕ್ಯಾರೊಲಿನ್‌ ಡೊಲೆಹೈಡ್‌ ಮೇಲೂ, ಡಾಮಿನಿಕ್‌ ಸಿಬುಲ್ಕೋವಾ 7–6, 6–1ರಲ್ಲಿ ಅಲೈಜ್ ಕಾರ್ನೆಟ್‌ ವಿರುದ್ಧವೂ, ಜೊಹಾನ್ನ ಕೊಂಥಾ 7–5, 7–6ರಲ್ಲಿ ನಟಾಲಿಯಾ ವಿಖಲ್ಯಾತ್ಸೆವಾ ಮೇಲೂ ಗೆದ್ದರು.

ಎರಡನೇ ಸುತ್ತಿಗೆ ಜ್ವೆರೆವ್‌: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಎರಡನೇ ಸುತ್ತು ಪ್ರವೇಶಿಸಿದರು.

ಮೊದಲ ಸುತ್ತಿನ ಹೋರಾಟದಲ್ಲಿ ನಾಲ್ಕನೇ ಶ್ರೇಯಾಂಕಿತ ಆಟಗಾರ ಜ್ವೆರೆವ್‌ 7–5, 6–2, 6–0ರಲ್ಲಿ ಜೇಮ್ಸ್‌ ಡಕ್ವರ್ಥ್‌ ವಿರುದ್ಧ ಗೆದ್ದರು.

ಇನ್ನೊಂದು ಪಂದ್ಯದಲ್ಲಿ ಅರ್ಜೆಂಟೀನಾದ ವುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ 6–3, 6–4, 6–3ರಲ್ಲಿ ಜರ್ಮನಿಯ ಪೀಟರ್‌ ಗೊಜೊವ್‌ಸ್ಕಿ ಸವಾಲು ಮೀರಿದರು.

ಸ್ಪೇನ್‌ನ ಫೆಲಿಸಿಯಾನೊ ಲೊ‍ಪೆಜ್‌ 6–3, 6–4, 6–2ರಲ್ಲಿ ಅರ್ಜೆಂಟೀನಾದ ಫೆಡೆರಿಕೊ ಡೆಲ್‌ ಬೊನಿಸ್‌ ಅವರನ್ನು ಸೋಲಿಸಿದರು.

ಇತರ ಪಂದ್ಯಗಳಲ್ಲಿ ಜಿರಿ ವೆಸ್ಲಿ 7–6, 6–4, 4–6, 6–1ರಲ್ಲಿ ಫ್ಲೋರಿಯನ್‌ ಮೇಯರ್‌ ಎದುರೂ, ಡೀಗೊ ಸ್ವಾರ್ಟ್ಜ್‌ಮನ್‌ 6–3, 6–2, 6–2ರಲ್ಲಿ ಮಿರ್ಜಾ ಬೆಸಿಕ್‌ ಮೇಲೂ, ಅರ್ನೆಸ್ಟ್‌ ಗುಲ್ಬಿಸ್‌ 4–6, 6–3, 7–6, 3–6, 6–4ರಲ್ಲಿ ಜೇ ಕ್ಲಾರ್ಕ್‌ ವಿರುದ್ಧವೂ, ಕೀ ನಿಶಿಕೋರಿ 6–2, 4–6, 7–6, 6–2ರಲ್ಲಿ ಕ್ರಿಸ್ಟಿಯನ್‌ ಹ್ಯಾರಿಸನ್‌ ಮೇಲೂ, ದಮಿರ್‌ ಜುಮುಹರ್‌ 6–3, 6–2, 6–4ರಲ್ಲಿ ಮ್ಯಾಕ್ಸಿಮಿಲಿಯನ್‌ ಮಾರ್ಟೆರರ್‌ ವಿರುದ್ಧವೂ, ಬರ್ನಾರ್ಡ್‌ ಟೊಮಿಕ್‌ 6–4, 6–2, 7–6ರಲ್ಲಿ ಹುಬರ್ಟ್‌ ಹುರ್ಕಾಜ್‌ ಎದುರೂ, ಕೈಲ್‌ ಎಡ್ಮಂಡ್‌ 6–2, 6–3, 7–5ರಲ್ಲಿ ಅಲೆಕ್ಸ್‌ ಬೋಲ್ಟ್‌ ವಿರುದ್ಧವೂ ವಿಜಯಿಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !