ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್ ಓಪನ್ ಟೆನಿಸ್: ಜೊಕೊ ಸವಾಲ್ ಮೀರಿದ ನಡಾಲ್

ಮಹಿಳೆಯರ ಸಿಂಗಲ್ಸ್ ಸೆಮಿಗೆ ಸ್ವೆಟೆಕ್‌, ದರಿಯಾ
Last Updated 2 ಜೂನ್ 2022, 1:12 IST
ಅಕ್ಷರ ಗಾತ್ರ

ಪ್ಯಾರಿಸ್: ಆವೆಮಣ್ಣಿನ ಅಂಕಣದಲ್ಲಿ ರಫೆಲ್ ನಡಾಲ್ ಮತ್ತೊಮ್ಮೆ ತಮ್ಮ ಪ್ರತಾಪ ಮೆರೆದರು.

ರೋಲ್ಯಾಂಡ್ ಗ್ಯಾರೊಸ್‌ ಕೋರ್ಟ್‌ನಲ್ಲಿ ಮೇ 31ರ ರಾತ್ರಿ ಆರಂಭವಾಗಿ ಜೂನ್ 1ರ ಬೆಳಗಿನ ಜಾವದಲ್ಲಿ ಮುಗಿದ ಎಂಟರ ಘಟ್ಟದ ಪಂದ್ಯದಲ್ಲಿ ಸ್ಪೇನ್‌ ಆಟಗಾರ ನಡಾಲ್6-2, 4-6, 6-2, 7-6 (4) ರಿಂದ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಚ್ ವಿರುದ್ಧ ಜಯಿಸಿದರು. ಸೆಮಿಫೈನಲ್ ಪ್ರವೇಶಿಸಿದ ನಡಾಲ್ 22ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯದತ್ತ ಚಿತ್ತ ನೆಟ್ಟಿದ್ದಾರೆ.

‘ನಾ ಕಂಡ ಕೆಲವು ಮಾಂತ್ರಿಕ ರಾತ್ರಿಗಳಲ್ಲಿ ಇದೂ ಒಂದಾಗಿದೆ’ ಎಂದು ಪಂದ್ಯ ಜಯಿಸಿದ ನಂತರ ನಡಾಲ್ ಹೇಳಿದರು.

ನಡಾಲ್ ಇದೇ ಶುಕ್ರವಾರ 36ನೇ ವಸಂತಕ್ಕೆ ಕಾಲಿಡಲಿದ್ದಾರೆ. ಅದೇ ದಿನ ನಡೆಯಲಿರುವ ಸೆಮಿಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಎದುರಿಸಲಿದ್ದಾರೆ.

ಇಲ್ಲಿ ನಾಲ್ಕು ಗಂಟೆಗಳ ಹೋರಾಟದಲ್ಲಿ ಜಯ ಸಾಧಿಸಿದರು. ಉಭಯ ಆಟಗಾರರ ನಡುವಣ ತುರುಸಿನ ಪೈಪೋಟಿಯಿಂದಾಗಿ ಪಂದ್ಯವು ಫೈನಲ್‌ನಂತೆಯೇ ಭಾಸವಾಯಿತು.

ಎಂಟರ ಘಟ್ಟದ ಮೊದಲ ಸೆಟ್‌ನಲ್ಲಿ ನಿರಾಯಾಸವಾಗಿ ಗೆದ್ದ ನಡಾಲ್ ಎರಡನೇ ಸೆಟ್‌ನಲ್ಲಿಯೂ 3–0 ಗೇಮ್‌ಗಳ ಮುನ್ನಡೆ ಸಾಧಿಸಿದರು. ಆದರೆ, ಅಗ್ರಶ್ರೇಯಾಂಕದ ಆಟಗಾರ, ಸರ್ಬಿಯಾದ ಜೊಕೊವಿಚ್ ತಿರುಗೇಟು ನೀಡಿದರು.

‘ಎರಡನೇ ಸೆಟ್‌ನಲ್ಲಿ ಗೆದ್ದಾಗ ಹಳಿಗೆ ಮರಳಿದೆ ಎಂದುಕೊಂಡೆ. ಮುಂದಿನ ಸೆಟ್‌ಗಳಲ್ಲಿ ಸುಲಭ ಜಯ ಸಾಧಿಸುವ ವಿಶ್ವಾಸ ಮೂಡಿತ್ತು. ಆದರೆ, ಒಬ್ಬ ಶ್ರೇಷ್ಠ ಆಟಗಾರನ ಎದುರು ಪರಾಭವಗೊಂಡೆ. ಅದ್ಭುತ ಆಟವಾಡಿದರು’ ಎಂದು ನೊವಾಕ್ ಹೇಳಿದರು.

ಉಭಯ ಆಟಗಾರರು ಗ್ರ್ಯಾನ್‌ಸ್ಲಾಮ್ ಓಪನ್ ಟೂರ್ನಿಗಳಲ್ಲಿ 59ನೇ ಬಾರಿ ಮುಖಾಮುಖಿಯಾದರು. ನಡಾಲ್ 29ನೇ ಬಾರಿ ಜಯಿಸಿದರು. ಫ್ರೆಂಚ್ ಓಪನ್ ಟೂರ್ನಿಯಲ್ಲಿ ನಡಾಲ್ 8–2ರಿಂದ ನೊವಾಕ್ ಎದುರು ಮುನ್ನಡೆ ಸಾಧಿಸಿದರು.

ಸೆಮಿಗೆ ಸ್ವೆಟೆಕ್‌, ದರಿಯಾ: ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಪೋಲೆಂಡ್‌ನ ಇಗಾ ಸ್ವೆಟೆಕ್‌ ಮತ್ತು ರಷ್ಯಾದ ದರಿಯಾ ಕಸ್ತಕಿನಾ ಮಹಿಳಾ ಸಿಂಗಲ್ಸ್ ವಿಭಾಗದ ನಾಲ್ಕರ ಘಟ್ಟ ತಲುಪಿದರು. ಎಂಟರಘಟ್ಟದ ಪಂದ್ಯ ಗಳಲ್ಲಿ ಬುಧವಾರ ಸ್ವೆಟೆಕ್‌6-3, 6-2ರಿಂದ ಅಮೆರಿಕದ ಜೆಸಿಕಾ ಪೆಗುಲಾ ಅವರನ್ನು ಸೋಲಿಸಿದರೆ, ದರಿಯಾ6-4, 7-6 (7/5)ರಿಂದ ವೆರೊನಿಕಾ ಕುದರ್ಮೆಟೊವಾ ಎದುರು ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT