ಚೆನ್ನೈ: ಗೆಲುವಿನ ಓಟ ಮುಂದುವರಿಸಿದ ಸುಮಿತ್ ನಗಾಲ್ ಅವರು ಚೆನ್ನೈ ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದರು.

ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಆಟಗಾರ 6–1, 6–4 ರಲ್ಲಿ ಬ್ರಿಟನ್‌ನ ಜೇ ಕ್ಲಾರ್ಕ್ ಅವರನ್ನು ಮಣಿಸಿದರು. ಈ ಪಂದ್ಯ ಒಂದು ಗಂಟೆ 22 ನಿಮಿಷ ನಡೆಯಿತು.

ವಿಶ್ವ ರ್‍ಯಾಂಕಿಂಗ್‌ನಲ್ಲಿ 506ನೇ ಸ್ಥಾನದಲ್ಲಿರುವ ನಗಾಲ್, ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ನಿಕೊಲಸ್ ಮೊರೆನೊ ಅವರ ಸವಾಲು ಎದುರಿಸುವರು. ಮೊರೆನೊ ಮತ್ತೊಂದು ಎಂಟರಘಟ್ಟದ ಪಂದ್ಯದಲ್ಲಿ 6–3, 6–4 ರಲ್ಲಿ ಜಪಾನ್‌ನ ಯಸುತುಕ ಉಚಿಯಾಮ ವಿರುದ್ಧ ಗೆದ್ದರು.

ಇನ್ನೊಂದು ಸೆಮಿಫೈನಲ್‌ನಲ್ಲಿ ಮ್ಯಾಕ್ಸ್ ಪರ್ಸೆಲ್ ಮತ್ತು ಡೇನ್ ಸ್ವೀನಿ ಎದುರಾಗಲಿದ್ದಾರೆ.

ಡಬಲ್ಸ್ ವಿಭಾಗದಲ್ಲಿ ಸೆಬಾಸ್ಟಿಯನ್ ಆಫ್ನೆರ್– ನಿನೊ ಸೆರ್ಡರುಸಿಚ್ ಜೋಡಿ 4–6, 7–6, 10–4 ರಲ್ಲಿ ಭಾರತದ ಎನ್.ಶ್ರೀರಾಮ್ ಬಾಲಾಜಿ– ಜೀವನ್ ನೆಡುಂಚೆಳಿಯನ್ ಜೋಡಿಗೆ ಆಘಾತ ನೀಡಿ ಫೈನಲ್ ಪ್ರವೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.