ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗೆ ಚಕ್ಕರ್‌; ಬಾಡೂಟಕ್ಕೆ ಹಾಜರ್..!

Last Updated 5 ಫೆಬ್ರುವರಿ 2018, 19:25 IST
ಅಕ್ಷರ ಗಾತ್ರ

ಮುದ್ದೇಬಿಹಾಳ (ವಿಜಯಪುರ): ತಾಲ್ಲೂಕಿನ ರಕ್ಕಸಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಶಾಲೆಗೆ ಚಕ್ಕರ್‌ ಹೊಡೆದು, ಗುಂಡಿನ ಪಾರ್ಟಿ ಮಾಡಿರುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಜನವರಿ 31ರಂದು ಸೇವೆಯಿಂದ ನಿವೃತ್ತರಾದ ಸಹ ಶಿಕ್ಷಕ ಆರ್.ಬಿ.ಲಮಾಣಿ ಅವರಿಗೆ ಬೀಳ್ಕೊಡಲು ಶಾಲೆ ಸಮೀಪದ ಹೊಲವೊಂದರಲ್ಲಿ ಶಿಕ್ಷಕರು ಔತಣಕೂಟ ಆಯೋಜಿಸಿದ್ದರು. ಅಂದು ಮುಂಜಾನೆಯಿಂದ ಮಧ್ಯಾಹ್ನದವರೆಗೂ ಶಾಲೆ ನಡೆಸಿದ ಶಿಕ್ಷಕರು, ಊಟದ ಬಿಡುವಿನ ವೇಳೆಗೆ ವಿದ್ಯಾರ್ಥಿಗಳನ್ನು ಮೀಟಿಂಗ್‌ ನೆಪದಲ್ಲಿ ಮನೆಗೆ ಕಳುಹಿಸಿ, ಪಾರ್ಟಿಗೆ ಹೋಗಿದ್ದಾರೆ.

‘ತಿಂಗಳ ಕೊನೆ ದಿನವಾಗಿದ್ದರಿಂದ ಹಾಜರಿ, ಇನ್ನಿತರ ಕೆಲಸಕ್ಕಾಗಿ ಅರ್ಧ ದಿನ ರಜೆ ಕೊಡಲು ಅವಕಾಶವಿದೆ. ಅದರಂತೆ ನಡೆದುಕೊಂಡಿದ್ದೇವೆ’ ಎಂದು ಮುಖ್ಯಶಿಕ್ಷಕ ಎ.ಎಚ್‌.ಬಿರಾದಾರ ಗ್ರಾಮಸ್ಥರಿಗೆ ವಿವರಣೆ ನೀಡಿದ್ದಾರೆ.

‘ವಿಷಯ ತಿಳಿದು, ಔತಣಕೂಟದ ಸ್ಥಳಕ್ಕೆ ಹೋದೆ. ನಮ್ಮನ್ನು ನೋಡಿದ ಮುಖ್ಯ ಶಿಕ್ಷಕರು ಪರಾರಿಯಾದರು. ನಶೆಯಲ್ಲಿ ತೂರಾಡುತ್ತಿದ್ದ ಇಬ್ಬರು ಶಿಕ್ಷಕರು ತಪ್ಪೊಪ್ಪಿಕೊಂಡರು’ ಎಂದು ಗ್ರಾಮದ ಯುವಕ ಮಲ್ಲು ಪಟ್ಟಣಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಘಟನೆ ಸಂಬಂಧ ಡಿಡಿಪಿಐ, ಆಯುಕ್ತರಿಗೆ ವರದಿ ಕಳುಹಿಸಿರುವೆ’ ಎಂದು ಮುದ್ದೇಬಿಹಾಳ ಬಿಇಓ ಎಸ್‌.ಡಿ.ಗಾಂಜಿ ‘ಪ್ರಜಾವಾಣಿ’ಗೆ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT