ನಿನಾದ್‌ ರವಿ ರನ್ನರ್‌ ಅಪ್‌

7

ನಿನಾದ್‌ ರವಿ ರನ್ನರ್‌ ಅಪ್‌

Published:
Updated:
Deccan Herald

ಬೆಂಗಳೂರು: ಎರಡನೇ ಶ್ರೇಯಾಂಕಿತ ಆಟಗಾರ ನಿನಾದ್‌ ರವಿ, 16 ವರ್ಷದೊಳಗಿನವರ ಎಐಟಿಎ ಟಿ–7 ಟೆನಿಸ್‌ ಟೂರ್ನಿಯ ‍ಬಾಲಕರ ಸಿಂಗಲ್ಸ್‌ ಮತ್ತು ಡಬಲ್ಸ್‌ ವಿಭಾಗಗಳಲ್ಲಿ ರನ್ನರ್‌ ಅಪ್‌ ಆಗಿದ್ದಾರೆ.

ಕನಕಪುರ ರಸ್ತೆಯಲ್ಲಿರುವ ನಮ್ಮ ಸ್ಪೋರ್ಟ್ಸ್‌ ಟೆನಿಸ್‌ ಅಕಾಡೆಮಿಯ ಅಂಗಳದಲ್ಲಿ ಭಾನುವಾರ ನಡೆದ ಸಿಂಗಲ್ಸ್‌ ಫೈನಲ್‌ನಲ್ಲಿ ನಿನಾದ್‌ 1–6, 0–6ರ ನೇರ ಸೆಟ್‌ಗಳಿಂದ ಅಶ್ವಿನ್‌ ಎಂ.ಭಟ್‌ ಎದುರು ಪರಾಭವಗೊಂಡರು.

ಅಗ್ರಶ್ರೇಯಾಂಕಿತ ಆಟಗಾರ ಅಶ್ವಿನ್‌ ಎರಡು ಸೆಟ್‌ಗಳಲ್ಲೂ ಅಮೋಘ ಆಟ ಆಡಿ ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿದರು.

ಸಿಸ್ಟರ್‌ ನಿವೇದಿತಾ ಶಾಲೆಯ ವಿದ್ಯಾರ್ಥಿಯಾಗಿರುವ ನಿನಾದ್‌, ಡಬಲ್ಸ್‌ನಲ್ಲಿ ಗೊವಿನ್‌ ಸೆಹ್ವಾಗ್‌ ಜೊತೆಗೂಡಿ ಆಡಿದ್ದರು.

ಫೈನಲ್‌ನಲ್ಲಿ ಅಶ್ವಿನ್‌ ಭಟ್‌ ಮತ್ತು ಶ್ರವಣ್‌ ಆನಂದ್‌ 2–6, 7–6, 12–10ರಲ್ಲಿ ನಿನಾದ್‌ ಮತ್ತು ಗೊವಿನ್‌ ಅವರನ್ನು ಸೋಲಿಸಿದರು.

ಮೊದಲ ಸೆಟ್‌ನಲ್ಲಿ ಗೆದ್ದ ನಿನಾದ್‌ ಮತ್ತು ಗೊವಿನ್‌ ನಂತರದ ಎರಡು ಸೆಟ್‌ಗಳಲ್ಲೂ ಮಂಕಾದರು.

ಬಾಲಕಿಯರ ಸಿಂಗಲ್ಸ್‌ ವಿಭಾಗದಲ್ಲಿ ಆತ್ಮಿಕಾ ಶ್ರೀನಿವಾಸ್‌ ಕಿರೀಟ ಮುಡಿಗೇರಿಸಿಕೊಂಡರು.

ಫೈನಲ್‌ನಲ್ಲಿ ಆತ್ಮಿಕಾ ಅವರು ಅಮೋದಿನಿ ನಾಯಕ್‌ ಅವರನ್ನು ಮಣಿಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !