ಶುಕ್ರವಾರ, ಅಕ್ಟೋಬರ್ 18, 2019
20 °C
ಜಾನ್ ಮಿಲ್ಮ್ಯಾನ್‌ಗೆ ಗೆಲುವು

ಜಪಾನ್ ಓಪನ್ ಟೆನಿಸ್ ಟೂರ್ನಿ| ಗಫಿನ್‌ಗೆ ನಿರಾಸೆ; ಜೊಕೊವಿಚ್ ಫೈನಲ್‌ಗೆ

Published:
Updated:
Prajavani

ಟೋಕಿಯೊ: ವಿಶ್ವ ಕ್ರಮಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ಸರ್ಬಿಯಾದ ನೊವಾಕ್ ಜೊಕೊವಿಚ್ ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ. ಶನಿವಾರ ಸೆಮಿಫೈನಲ್‌ನಲ್ಲಿ ಅವರ ವಿರುದ್ಧ ಸೆಣಸಿದ ಬೆಲ್ಜಿಯಂನ ಡೇವಿಡ್ ಗಫಿನ್ 3–6, 4–6ರಲ್ಲಿ ಸೋತರು.

ಮೊದಲ ಮೂರು ಗೇಮ್‌ಗಳನ್ನು ಗೆದ್ದು ಸೆಮಿಫೈನಲ್ ಪಂದ್ಯದಲ್ಲಿ ಅಮೋಘ ಆರಂಭ ಕಂಡ ಜೊಕೊವಿಚ್ ಅದೇ ಲಯವನ್ನು ಮುಂದುವರಿಸಿ ಎದುರಾಳಿಯನ್ನು ಕಂಗೆಡಿಸಿದರು. ಎರಡನೇ ಸೆಟ್‌ನಲ್ಲೂ ಅವರ ಆಟದ ಮುಂದೆ ಗಫಿನ್‌ ಮಂಕಾದರು. 

ಫೈನಲ್‌ನಲ್ಲಿ ಜೊಕೊವಿಚ್ ಆಸ್ಟ್ರೇಲಿಯಾದ ಜಾನ್ ಮಿಲ್ಮ್ಯಾನ್ ಎದುರು ಸೆಣಸುವರು. ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡಿ ಮುಖ್ಯ ಸುತ್ತು ಪ್ರವೇಶಿಸಿದ್ದ ಜಾನ್ ಸೆಮಿಫೈನಲ್‌ನಲ್ಲಿ ಅಮೆರಿಕದ ರೇಲಿ ಒಪೆಲ್ಕಾ ವಿರುದ್ಧ 6–3, 7–6 (7/4)ರಲ್ಲಿ ಗೆಲುವು ಸಾಧಿಸಿದರು.

Post Comments (+)