ಲಂಡನ್: ವಿಂಬಲ್ಡನ್ನಲ್ಲಿ ಎರಡು ಬಾರಿ ಸಿಂಗಲ್ಸ್ ಪ್ರಶಸ್ತಿ ಗೆದ್ದಿರುವ ಆ್ಯಂಡಿ ಮರ್ರೆ ಪ್ರತಿಮೆಯನ್ನು ಆಲ್ ಇಂಗ್ಲೆಂಡ್ ಕ್ಲಬ್ನಲ್ಲಿ ಸ್ಥಾಪಿಸಿಲು ಆಯೋಜಕರು ಯೋಜನೆ ಹಾಕಿದ್ದಾರೆ.

2013ರಲ್ಲಿ ಮರ್ರೆ ಅವರು ವಿಂಬಲ್ಡನ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸುವ ಮೂಲಕ ಬ್ರಿಟನ್ನ 77 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದ್ದರು. 2016ರಲ್ಲಿ ಮತ್ತೆ ಮರ್ರೆ ಕಿರೀಟ ಮುಡಿಗೇರಿಸಿಕೊಂಡಿದ್ದರು. ಕಳೆದ ವರ್ಷ ಪ್ಯಾರಿಸ್ ಒಲಿಂಪಿಕ್ಸ್ ನಂತರ 38 ವರ್ಷದ ಮರ್ರೆ ಟೆನಿಸ್ಗೆ ವಿದಾಯ ಹೇಳಿದರು.

2027ರಲ್ಲಿ ಚಾಂಪಿಯನ್ಷಿಪ್ನ 150ನೇ ವಾರ್ಷಿಕೋತ್ಸವದ ಸಂದರ್ಭ ದಲ್ಲಿ ಮರ್ರೆ ಪ್ರತಿಮೆಯನ್ನು
ಅನಾವರಣಗೊಳಿಸುವ ಯೋಜನೆ ವಿಂಬಲ್ಡನ್ ಹೊಂದಿದೆ.

1934ರಿಂದ 1936ರವರೆಗೆ ಸತತ ಮೂರು ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದ ಬ್ರಿಟನ್ನ ಫ್ರೆಡ್ ಪೆರ್ರಿ ಅವರ ಕಂಚಿನ ಪ್ರತಿಮೆಯನ್ನು ಆಲ್ ಇಂಗ್ಲೆಂಡ್ ಕ್ಲಬ್ನಲ್ಲಿ 1984ರಲ್ಲಿ ಸ್ಥಾಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.