ಬುಧವಾರ, ಅಕ್ಟೋಬರ್ 23, 2019
21 °C

ಟೆನಿಸ್‌: ಮುಗ್ಗರಿಸಿದ ಪ್ರಜ್ಞೇಶ್‌

Published:
Updated:
Prajavani

ನಾರ್ತ್‌ ಕರೋಲಿನಾ: ವಿನ್ಸ್‌ಟನ್‌ ಸಲೇಮ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಅವರ ಸವಾಲು ಅಂತ್ಯವಾಗಿದೆ. ಬೆನೊಯಿಟ್‌ ಪೇರ್‌ ವಿರುದ್ಧ ಎರಡನೇ ಸುತ್ತಿನಲ್ಲಿ ಅವರು ಸೋತರು.

ಪ್ರಜ್ಞೇಶ್‌, ಫ್ರೆಂಚ್ ಆಟಗಾರನ ವಿರುದ್ಧ  3–6, 5–7 ಸೆಟ್‌ಗಳಿಂದ ನಿರಾಸೆ ಅನುಭವಿಸಿದರು.ಮೊದಲ ಸೆಟ್‌ನಲ್ಲಿ ಪ್ರಜ್ಞೇಶ್‌ ಸರ್ವ್‌ ಮುರಿದ ಪೇರ್‌ 2–0 ಮುನ್ನಡೆ ಪಡೆದರು. ಮುನ್ನಡೆ ಕಾಯ್ದುಕೊಳ್ಳುತ್ತಲೇ ಸಾಗಿದ ಪೇರ್‌ ಎದುರು ಭಾರತದ ಆಟಗಾರ ಸುಲಭವಾಗಿ ಮೊದಲ ಸೆಟ್‌ ಕೈಚೆಲ್ಲಿದರು.

ಎರಡನೇ ಸೆಟ್‌ನಲ್ಲಿ ಪ್ರಜ್ಞೇಶ್‌ ಸರ್ವ್‌ ಉಳಿಸಿಕೊಂಡರೂ 11ನೇ ಗೇಮ್‌ನಲ್ಲಿ ಪೇರ್‌ಗೆ ಜಯದ ಮುನ್ನಡೆ ಬಿಟ್ಟುಕೊಟ್ಟರು.

ಪೇಸ್‌ ಜೋಡಿಗೆ ಸೋಲು: ಟೂರ್ನಿಯಲ್ಲಿ ವೈಲ್ಡ್ ಕಾರ್ಡ್‌ ಪ್ರವೇಶ ಪಡೆದಿದ್ದ ಲಿಯಾಂಡರ್‌ ಪೇಸ್‌ ಹಾಗೂ ಇಸ್ರೇಲ್‌ನ ಜೋನಾಥನ್‌ ಎಲ್ರಿಚ್‌ ಜೋಡಿಯು ಪ್ರಥಮ ಸುತ್ತಿನಲ್ಲಿ ಸೋತಿತು. ರಾಜೀವ್‌ ರಾಮ್‌–ಜೊಯ್‌ ಸ್ಯಾಲಿಸ್ಬರಿ ಎದುರು 2–6, 3–6ರಿಂದ ಎಡವಿತು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)