ಸೋಮವಾರ, ಮಾರ್ಚ್ 1, 2021
24 °C

ಟೆನಿಸ್: ರಾಮಕುಮಾರ್ ಪರಾಭವ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಂಗಪುರ: ಭಾರತದ ರಾಮಕುಮಾರ್ ರಾಮನಾಥನ್ ಅವರು ಸಿಂಗಪುರ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದಾರೆ. ಸೋಮವಾರ ನಡೆದ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಅವರು 3–6, 7–6, 3–6ರಿಂದ ಅಮೆರಿಕದ ತಾರೊ ಡೇನಿಯಲ್ ಎದುರು ಸೋತರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 200ನೇ ಸ್ಥಾನದಲ್ಲಿರುವ ಭಾರತದ ಆಟಗಾರ, ತನಗಿಂತ 80 ಕ್ರಮಾಂಕ ಮೇಲಿರುವ ತಾರೊ ವಿರುದ್ಧ ಎರಡು ತಾಸು ಆರು ನಿಮಿಷಗಳಲ್ಲಿ ಪರಾಭವಗೊಂಡರು.

ಎದುರಾಳಿ ಆಟಗಾರನ ಸರ್ವ್ ಮುರಿಯಲು ರಾಮಕುಮಾರ್ ಅವರಿಗೆ ಎರಡು ಬಾರಿ ಅವಕಾಶಗಳಿದ್ದವು. ಆದರೆ ಅವುಗಳನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ತಾರೊ ಎದುರು ಅವರಿಗೆ ಇದು ಎರಡನೇ ಸೋಲು. 2012ರಲ್ಲಿ ಐಟಿಎಫ್‌ ಟೂರ್ನಿಯೊಂದರಲ್ಲಿ ರಾಮಕುಮಾರ್ ನಿರಾಸೆ ಅನುಭವಿಸಿದ್ದರು.

ರಾಮಕುಮಾರ್ ಅವರು ಪೂರವ್ ರಾಜ ಅವರೊಂದಿಗೆ ಡಬಲ್ಸ್‌ ವಿಭಾಗದಲ್ಲಿ ಅದೃಷ್ಟ ಪರೀಕ್ಷಿಸಲಿದ್ದಾರೆ.

ಕನ್ನಡಿಗ ರೋಹನ್ ಬೋಪಣ್ಣ, ಜೀವನ್‌ ನೆಡುಂಚೆರಿಯಾನ್‌ ಹಾಗೂ ಎನ್‌.ಶ್ರೀರಾಮ್ ಬಾಲಾಜಿ ಕೂಡ ಡಬಲ್ಸ್‌ನಲ್ಲಿ ಆಡಲಿದ್ದಾರೆ.

ಸುಮಾರು ಎರಡು ವರ್ಷಗಳ ಬಳಿಕ, ಈ ಟೂರ್ನಿಯ ಮೂಲಕ ಟೆನಿಸ್‌ಗೆ ಮರಳಿರುವ ಯೂಕಿ ಭಾಂಬ್ರಿ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.