ಶನಿವಾರ, ನವೆಂಬರ್ 28, 2020
17 °C

ಎಕೆಂಟಲ್‌ ಚಾಲೆಂಜರ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ಗೆ ರಾಮ್‌ಕುಮಾರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಎಕೆಂಟಲ್‌ (ಜರ್ಮನಿ): ಅಮೋಘ ಆಟವಾಡಿದ ಭಾರತದ ರಾಮ್‌ಕುಮಾರ್‌ ರಾಮನಾಥನ್‌ ಅವರು ಇಲ್ಲಿ ನಡೆಯುತ್ತಿರುವ ಎಕೆಂಟಲ್‌ ಚಾಲೆಂಜರ್ ಟೂರ್ನಿಯ ಟೆನಿಸ್ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಅವರು 6–2, 6–1ರಿಂದ ಇವ್‌ಜೆನಿ ಡೊನ್‌ಸ್ಕೊಯ್‌ ಸವಾಲು ಮೀರಿದರು.

ಶ್ರೇಯಾಂಕರಹಿತ ಆಟಗಾರ ರಾಮ್‌ಕುಮಾರ್‌ ಅವರಿಗೆ ಎದುರಾಳಿಯನ್ನು ಮಣಿಸಲು 57 ನಿಮಿಷಗಳು ಸಾಕಾದವು. ಅವರು 11 ಏಸ್‌ಗಳನ್ನು ಸಿಡಿಸಿದರು. ಈ ಟೂರ್ನಿಯ ನಾಲ್ಕರಘಟ್ಟ ತಲುಪುವ ಮೂಲಕ ರಾಮ್‌ಕುಮಾರ್‌ 35 ಪಾಯಿಂಟ್ಸ್‌ ಕಲೆ ಹಾಕಿದರು. ವಿಶ್ವ ಕ್ರಮಾಂಕದಲ್ಲಿ 206ನೇ ಸ್ಥಾನಕ್ಕೆ ಏರಿದರು.

ರಾಮ್‌ಕುಮಾರ್‌ ಈ ಋತುವಿನಲ್ಲಿ ತೋರಿದ ಶ್ರೇಷ್ಠ ಸಾಮರ್ಥ್ಯ ಇದು. ಜನವರಿಯಲ್ಲಿ ನಡೆದ ಬ್ಯಾಂಕಾಂಕ್‌ ಚಾಲೆಂಜರ್‌ ಟೂರ್ನಿಯಲ್ಲಿ ಅವರು ಕ್ವಾರ್ಟರ್‌ಫೈನಲ್‌ ತಲುಪಿದ್ದರು.

120ನೇ ಕ್ರಮಾಂಕದಲ್ಲಿರುವ ಡೊನ್‌ಸ್ಕೊಯ್‌ ಎದುರು ರಾಮ್‌ಕುಮಾರ್ ಅವರಿಗೆ ಒಲಿದ ಮೊದಲ ಜಯ ಇದು. 2015ರಲ್ಲಿ ನಡೆದ ಕಾರ್ಶಿ ಚಾಲೆಂಜರ್‌ ಟೂರ್ನಿಯಲ್ಲಿ ಭಾರತದ ಆಟಗಾರ ಸೋಲು ಅನುಭವಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು