ಸೋಮವಾರ, ಮಾರ್ಚ್ 20, 2023
24 °C

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಪ್ರೀ ಕ್ವಾರ್ಟರ್‌ ಫೈನಲ್‌ಗೆ ಜೊಕೊವಿಚ್

ಎಎಫ್‌ಪಿ/ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ಇಪ್ಪತ್ತೆರಡನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅವರು ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಅವರು 7-6 (9/7), 6-3, 6-4 ರಲ್ಲಿ ಬಲ್ಗೇರಿಯದ ಗ್ರಿಗೊರ್‌ ದಿಮಿತ್ರೊವ್‌ ವಿರುದ್ಧ ಗೆದ್ದರು. ಮೊದಲ ಸೆಟ್‌ ಗೆಲ್ಲಲು 77 ನಿಮಿಷಗಳನ್ನು ತೆಗೆದುಕೊಂಡ ಜೊಕೊವಿಚ್‌, ಆ ಬಳಿಕ ಪೂರ್ಣ ಪ್ರಭುತ್ವ ಮೆರೆದರು.

ಮರೆಗೆ ನಿರಾಸೆ: ಬ್ರಿಟನ್‌ನ ಆ್ಯಂಡಿ ಮರೆ ಅವರ ಸವಾಲಿಗೆ ಮೂರನೇ ಸುತ್ತಿನಲ್ಲಿ ತೆರೆಬಿತ್ತು. ಸ್ಪೇನ್‌ನ ರಾಬರ್ಟೊ ಬಾಟಿಸ್ಟಾ ಆಗಟ್ 6-1, 6-7(7), 6-3, 6-4 ರಲ್ಲಿ ಮರೆ ವಿರುದ್ಧ ಗೆದ್ದರು.

ರಷ್ಯಾದ ಆಂಡ್ರೆ ರುಬ್ಲೆವ್ 6–4, 6–2, 6–3 ರಲ್ಲಿ ಡೇನಿಯಲ್‌ ಇವಾನ್ಸ್‌ ಅವರನ್ನು ಮಣಿಸಿದರು. 16ರ ಘಟ್ಟದ ಪಂದ್ಯದಲ್ಲಿ ಅವರು ಡೆನ್ಮಾರ್ಕ್‌ನ ಹೋಲ್ಗರ್‌ ರೂನ್‌ ವಿರುದ್ಧ ಪೈಪೋಟಿ ನಡೆಸುವರು. ರೂನ್‌ 6–4, 6–2, 7–6 ರಲ್ಲಿ ಯೂಗೊ ಹಂಬರ್ಟ್‌ ಎದುರು ಜಯಿಸಿದರು.

ಇತರ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್‌ ಡಿ ಮಿನೌರ್ 7–6, 6–2, 6–1 ರಲ್ಲಿ ಫ್ರಾನ್ಸ್‌ನ ಬೆಂಜಮಿನ್‌ ಬೊನ್ಜಿ ವಿರುದ್ಧ; ಅಮೆರಿಕದ ಜೆಫ್ರಿ ವೂಲ್ಫ್‌ 6–4, 6–1, 6–2 ರಲ್ಲಿ ತಮ್ಮದೇ ದೇಶದ ಮೈಕಲ್‌ ಮೊವ ವಿರುದ್ಧ; ಅಮೆರಿಕದ ಟಾಮಿ ಪಾಲ್ 6–1, 6–4, 6–3 ರಲ್ಲಿ ಜೆನ್ಸನ್‌ ಬ್ರೂಕ್ಸ್‌ಬಿ ವಿರುದ್ಧ ಜಯಿಸಿದರು.

16ರ ಘಟ್ಟಕ್ಕೆ ಸಬಲೆಂಕಾ: ಐದನೇ ಶ್ರೇಯಾಂಕದ ಆಟಗಾರ್ತಿ ಬೆಲಾರಸ್‌ನ ಅರಿನಾ ಸಬಲೆಂಕಾ ಅವರು ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಶನಿವಾರ ನಡೆದ ಮೂರನೇ ಸುತ್ತಿನ ಹೋರಾಟದಲ್ಲಿ ಅವರು 6–2, 6–3 ರಲ್ಲಿ ಬೆಲ್ಜಿಯಂನ ಎಲೈಸ್ ಮರ್ಟೆನ್ಸ್‌ ವಿರುದ್ಧ ಗೆದ್ದರು.

ಕ್ರಮವಾಗಿ 30 ಹಾಗೂ 23ನೇ ಶ್ರೆಯಾಂಕ ಹೊಂದಿರುವ ಕರೊಲಿನಾ ಪಿಸ್ಕೊವಾ ಮತ್ತು ಜಾಂಗ್‌ ಶುಯಿ ಅವರೂ 16ರ ಘಟ್ಟ ಪ್ರವೇಶಿಸಿದರು. ಜೆಕ್‌ ರಿಪಬ್ಲಿಕ್‌ನ ಪಿಸ್ಕೊವಾ 6–4, 6–2 ರಲ್ಲಿ ರಷ್ಯಾದ ವರ್ವರಾ ಗ್ರಶೆವಾ ಅವರನ್ನು ಮಣಿಸಿದರೆ, ಚೀನಾದ ಶುಯಿ 6–3, 6–2 ರಲ್ಲಿ ಅಮೆರಿಕದ ಕೇಟಿ ವೊಲಿನೆಟ್ಸ್‌ ವಿರುದ್ಧ ಜಯಿಸಿದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಇತರ ಪಂದ್ಯಗಳಲ್ಲಿ ಸ್ವಿಟ್ಜರ್‌ಲೆಂಡ್‌ನ ಬೆಲಿಂಡಾ ಬೆನ್ಸಿಚ್ 6–2, 7–5 ರಲ್ಲಿ ಇಟಲಿಯ ಕ್ಯಾಮಿಲಾ ಜಾರ್ಜಿ ವಿರುದ್ಧ; ಕ್ರೊವೇಷ್ಯದ ಲಿಂಡಾ ಫ್ರುವಿರ್ತೊವಾ 6–2, 6–2 ರಲ್ಲಿ ಸ್ಪೇನ್‌ನ ನೂರಿಯ ಪರಿಜಾಸ್‌ ಡಯಾಸ್‌ ವಿರುದ್ಧ ಗೆದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು