ಮ್ಯಾಡ್ರಿಡ್: ಬೆಲಾರೂಸ್ನ ಅರಿನಾ ಸಬಲೆಂಕಾ ಅವರು ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆದರು.

ಶನಿವಾರ ನಡೆದ ಫೈನಲ್ನಲ್ಲಿ ವಿಶ್ವದ ಎರಡನೇ ರ್ಯಾಂಕ್ನ ಆಟಗಾರ್ತಿ ಸಬಲೆಂಕಾ 6–3, 3–6, 6–3 ರಲ್ಲಿ ಅಗ್ರ ರ್ಯಾಂಕ್ನ ಆಟಗಾರ್ತಿ ಪೋಲೆಂಡ್ನ ಇಗಾ ಶ್ವಾಂಟೆಕ್ ಅವರನ್ನು ಮಣಿಸಿದರು. 2021 ರಲ್ಲೂ ಅವರು ಇಲ್ಲಿ ಪ್ರಶಸ್ತಿ ಜಯಿಸಿದ್ದರು.

ಎರಡು ವಾರಗಳ ಹಿಂದೆ ಸ್ಟಟ್ಗರ್ಟ್ನಲ್ಲಿ ನಡೆದಿದ್ದ ಟೂರ್ನಿಯ ಫೈನಲ್ನಲ್ಲಿ ತಮಗೆ ಎದುರಾಗಿದ್ದ ಸೋಲಿಗೆ ಸಬಲೆಂಕಾ ಮುಯ್ಯಿ ತೀರಿಸಿಕೊಂಡರು. ಕ್ಲೇ ಕೋರ್ಟ್ನಲ್ಲಿ ಈ ಹಿಂದೆ ಇವರು ಮೂರು ಸಲ ಎದುರಾಗಿದ್ದು, ಬೆಲಾರೂಸ್ನ ಆಟಗಾರ್ತಿ ಒಂದೂ ಸೆಟ್ ಗೆದ್ದಿರಲಿಲ್ಲ. ಆದರೆ ಶನಿವಾರ ಶಿಸ್ತಿನ ಆಟವಾಡಿ ಗೆಲುವು ಒಲಿಸಿಕೊಂಡರು.

‘ಡಬ್ಲ್ಯುಟಿಎ 1000’ ಟೂರ್ನಿಯ ಫೈನಲ್ನಲ್ಲಿ ವಿಶ್ವದ ಮೊದಲ ಎರಡು ರ್ಯಾಂಕ್ನ ಆಟಗಾರ್ತಿಯರು ಪೈಪೋಟಿ ನಡೆಸಿದ್ದು 2014ರ ಬಳಿಕ ಇದೇ ಮೊದಲು. 2014 ರ ಮಿಯಾಮಿ ಓಪನ್ ಫೈನಲ್ನಲ್ಲಿ ಅಂದಿನ ಅಗ್ರ ರ್ಯಾಂಕ್ನ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು ಎರಡನೇ ರ್ಯಾಂಕ್ನ ಲಿ ನಾ ವಿರುದ್ದ ಸೆಣಸಾಡಿದ್ದರು.

ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಕಾರ್ಲೊಸ್ ಅಲ್ಕರಾಜ್ ಮತ್ತು ಜಾನ್ ಲೆನಾರ್ಡ್ ಸ್ಟ್ರಫ್ ಎದುರಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.