ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈ ಟೆನಿಸ್‌ ಚಾಂಪಿಯನ್‌ಷಿಪ್‌: ನಾಲ್ಕರ ಘಟ್ಟಕ್ಕೆ ಸಾನಿಯಾ ಜೋಡಿ

Last Updated 17 ಫೆಬ್ರುವರಿ 2022, 13:27 IST
ಅಕ್ಷರ ಗಾತ್ರ

ದುಬೈ: ಅಮೋಘ ಆಟ ಮುಂದುವರಿಸಿದ ಭಾರತದ ಸಾನಿಯಾ ಮಿರ್ಜಾ ಮತ್ತು ಜೆಕ್‌ ಗಣರಾಜ್ಯದ ಲೂಸಿ ಹ್ರದೆಕಾ ಜೋಡಿಯು ದುಬೈ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ಗೆ ಮುನ್ನಡೆದಿದ್ದಾರೆ.

ಟೂರ್ನಿಗೆ ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದಿರುವ ಸಾನಿಯಾ ಮತ್ತು ಲೂಸಿ ಎಂಟರಘಟ್ಟದ ಹಣಾಹಣಿಯಲ್ಲಿ ಗುರುವಾರ7-5, 6-3ರಿಂದ ಜಪಾನ್‌ನ ಶುಕೊ ಓಯಮಾ ಮತ್ತು ಸರ್ಬಿಯಾದ ಅಲೆಕ್ಸಾಂಡ್ರಾ ಕ್ರುನಿಚ್‌ ಸವಾಲು ಮೀರಿದರು.

ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತ– ಜೆಕ್‌ ಜೋಡಿಯು, ಅಗ್ರಶ್ರೇಯಾಂಕದ ಜಪಾನ್‌ನ ಎನಾ ಶಿಬಹರಾ– ಚೀನಾದ ಶುಯಿ ಜಾಂಗ್‌ ಮತ್ತು ಉಕ್ರೇನ್‌ನ ಲುಡ್ಮಿಲಾ ಕಿಚೆನೊಕ್‌ – ಲಾಟ್ವಿಯಾದ ಎಲೆನಾ ಒಸ್ತಾಪೆಂಕೊ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

2013ರಲ್ಲಿ ಸಾನಿಯಾ ಅಮೆರಿಕದ ಬೆಥನಿ ಮ್ಯಾಟಕ್ ಸ್ಯಾಂಡ್‌ ಜೊತೆಗೂಡಿ ಇಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

ಮಿಶ್ರ ಡಬಲ್ಸ್‌ನಲ್ಲಿಮೂರು ಟ್ರೋಫಿಗಳು ಸೇರಿದಂತೆ ಆರು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿರುವ 35 ವರ್ಷದ ಸಾನಿಯಾ ಅವರು ಈ ವರ್ಷಾಂತ್ಯದಲ್ಲಿ ನಿವೃತ್ತಿಯಾಗುವುದಾಗಿ ಈಗಾಗಲೇ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT