ಮಂಗಳವಾರ, ಸೆಪ್ಟೆಂಬರ್ 17, 2019
24 °C
ಕೆನಡಾದ ಯುವ ಆಟಗಾರ್ತಿ ಫೈನಲ್‌ ಪ್ರವೇಶ

ಅಮೆರಿಕ ಓಪನ್ ಟೆನಿಸ್ ಟೂರ್ನಿ: ಸೆರೆನಾ–ಬಿಯಾಂಕ ಫೈನಲ್ ಹಣಾಹಣಿ

Published:
Updated:
Prajavani

ನ್ಯೂಯಾರ್ಕ್‌ (ಎಎಫ್‌ಪಿ): ದಾಖಲೆ ಸಮಗಟ್ಟುವ ನಿರೀಕ್ಷೆಯೊಂದಿಗೆ ಅಮೆರಿಕದ ಸೆರೆನಾ ವಿಲಿಯಮ್ಸ್ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಕಣಕ್ಕೆ ಇಳಿಯುವರು.

ಶನಿವಾರ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಯುವ ಆಟಗಾರ್ತಿ, ಕೆನಡಾದ ಬಿಯಾಂಕ ಆ್ಯಂಡ್ರಿಸ್ಕು ಅವರು ಸೆರೆನಾ ಎದುರು ಸೆಣಸಲಿದ್ದಾರೆ. ಈ ಪಂದ್ಯದಲ್ಲಿ ಗೆದ್ದರೆ 24ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗಳಿಸಿದ ಸಾಧನೆ ಸೆರೆನಾ ಅವರದಾಗಲಿದೆ. ಅತಿ ಹೆಚ್ಚು ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದ ಮಾರ್ಗರೆಟ್ ಕೋರ್ಟ್ ಅವರ ದಾಖಲೆಯನ್ನು ಸಮಗಟ್ಟಲಿದ್ದಾರೆ.

ಗುರುವಾರ ರಾತ್ರಿ ನಡೆದ ಸೆಮಿಫೈನಲ್‌ನಲ್ಲಿ ಎಲಿನಾ ಸ್ವಿಟೋಲಿನಾ ಅವರನ್ನು 6–3, 6–1ರಲ್ಲಿ ಮಣಿಸಿದ ಸೆರೆನಾ 10ನೇ ಬಾರಿ ಅಮೆರಿಕ ಓಪನ್ ಟೂರ್ನಿಯ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದರು. ಇದು ಈ ಟೂರ್ನಿಯಲ್ಲಿ ಅವರ 101ನೇ ಜಯವಾಗಿದೆ. ಈ ಮೂಲಕ ಕ್ರಿಸ್‌ ಎವರ್ಟ್ ಅವರ ದಾಖಲೆಯನ್ನು ಸೆರೆನಾ ಸಮಗಟ್ಟಿದರು.

19 ವರ್ಷದ ಆ್ಯಂಡ್ರಿಸ್ಕೂ ಸೆಮಿಫೈನಲ್‌ನಲ್ಲಿ ಬೆಲಿಂದಾ ಬೆನ್ಸಿಕ್ ಎದುರು 7–6 (7/3), 7–5ರಲ್ಲಿ ಗೆಲುವು ಸಾಧಿಸಿದರು.

Post Comments (+)