ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ: ಸೆರೆನಾ ವಿಲಿಯಮ್ಸ್‌ ಫೈನಲ್‌ಗೆ ಲಗ್ಗೆ

Last Updated 7 ಸೆಪ್ಟೆಂಬರ್ 2018, 2:24 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಎಎಫ್‌ಪಿ/ರಾಯಿಟರ್ಸ್‌):ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಅಮೆರಿಕದಸೆರೆನಾ ವಿಲಿಯಮ್ಸ್‌ಲಾಟ್ವಿಯಾದ ಅನಸ್ತೇಸಿಜಾ ಸೆವಾಸ್ಟೋವಾ ಅವರನ್ನು ಮಣಿಸುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ.

ಆರ್ಥರ್‌ ಆ್ಯಷೆ ಅಂಗಳದಲ್ಲಿ ತವರಿನ ಅಭಿಮಾನಿಗಳ ಎದುರು ಆಡಿದ ಸೆರೆನಾ ಈ ಪಂದ್ಯದಲ್ಲಿ ನಿರೀಕ್ಷೆಯಂತೆ ಜಯ ದಾಖಲಿಸಿದರು. ಅನಸ್ತೇಸಿಜಾ ಸೆವಾಸ್ಟೋವಾ ಅವರನ್ನು 6–3, 6–0 ನೇರ ಸೆಟ್‌ಗಳಿಂದ ಸೋಲಿಸಿದರು.

ನಾಳೆ ನಡೆಯುವ ಪೈನಲ್‌ ಪಂದ್ಯದಲ್ಲಿ ಅಮೆರಿಕನ್ ಓಪನ್‌ ಟ್ರೋಫಿ ಗೆದ್ದರೆ ಸೆರೆನಾ 24 ಗ್ರ್ಯಾಂಡ್‌ಸಸ್ಲ್ಯಾಮ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಂತಾಗುತ್ತದೆ.

ಕ್ವಾರ್ಟರ್ ‍ಫೈನಲ್‌ನಲ್ಲಿ ಸೆರೆನಾ ಅವರು ಕ್ಯಾರೋಲಿನಾ ಪ್ಲಿಸ್ಕೋವಾ ಅವರನ್ನು ಸೋಲಿಸಿದ್ದರು.ಟೂರ್ನಿಯಲ್ಲಿ ಸೆರೆನಾ17ನೇ ಶ್ರೇಯಾಂಕ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT