ಬುಧವಾರ, ಜನವರಿ 29, 2020
27 °C

ಟೆನಿಸ್‌: ನಿಕ್ಷೇಪ್‌–ಸೂರಜ್‌ಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದ ಬಿ.ಆರ್‌.ನಿಕ್ಷೇಪ್‌ ಮತ್ತು ಸೂರಜ್‌ ಪ್ರಭೋದ್‌ ಅವರು ರಾಯ‍ಪುರದಲ್ಲಿ ನಡೆಯುತ್ತಿರುವ ಎಐಟಿಎ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋತಿದ್ದಾರೆ.

ಗುರುವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಹಣಾಹಣಿಯಲ್ಲಿ ನಿಕ್ಷೇಪ್‌ ಮತ್ತು ಸೂರಜ್‌ 5–7, 3–6ರಲ್ಲಿ ರಾಜಸ್ಥಾನದ ಫೈಸಲ್‌ ಕ್ವಾಮರ್‌ ಮತ್ತು ಫರ್ದೀನ್‌ ಕ್ವಾಮರ್‌ ವಿರುದ್ಧ ಪರಾಭವಗೊಂಡರು.

ಮೊದಲ ಸೆಟ್‌ನಲ್ಲಿ ಎದುರಾಳಿಗಳಿಗೆ ಪ್ರಬಲ ಪೈಪೋಟಿ ಒಡ್ಡಿದ ಕರ್ನಾಟಕದ ಜೋಡಿ, ಎರಡನೇ ಸೆಟ್‌ನಲ್ಲಿ ಮಂಕಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು