ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಪಂದ್ಯದಿಂದ ರುಬ್ಲೆವ್ ಹೊರಕ್ಕೆ

Published 2 ಮಾರ್ಚ್ 2024, 23:30 IST
Last Updated 2 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ದುಬೈ : ಲೈನ್ ಅಂಪೈರ್ ವಿರುದ್ಧ ಅಸಭ್ಯ ಭಾಷೆ ಬಳಸಿದರೆಂಬ ಕಾರಣಕ್ಕೆ ರಷ್ಯಾದ ಆಂಡ್ರೆ ರುಬ್ಲೆವ್ ಅವರನ್ನು ದುಬೈ ಎಟಿಪಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಶುಕ್ರವಾರ ಅನರ್ಹಗೊಳಿಸಲಾಯಿತು. ಅವರ ಎದುರಾಳಿ ಕಜಕಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್‌ ಅವರನ್ನು ವಿಜೇತರೆಂದು ಘೋಷಿಸಲಾಯಿತು.  

ಹೊಸ ಚೆಂಡುಗಳನ್ನು ನೀಡಿದ ಸಮಯದ ಬಗ್ಗೆ ಬುಬ್ಲಿಕ್ ಮತ್ತು ಚೇರ್ ಅಂಪೈರ್ ಮಿರಿಯಮ್ ಬ್ಲೇ ನಡುವೆ ವಾಗ್ವಾದ ನಡೆಯಿತು. ಎದುರಾಳಿಯಾಗಿದ್ದ ರುಬ್ಲೆವ್ 6-7 (4/7), 7-6 (7/5), 6-5 ರಲ್ಲಿ ಮುನ್ನಡೆಯಲ್ಲಿದ್ದು ತಾಳ್ಮೆ ಕಳೆದುಕೊಂಡು ಲೈನ್ ಅಂಪೈರ್ ಕಡೆಗೆ ಕೂಗಿದರು ಮತ್ತು ರಷ್ಯನ್ ಭಾಷೆಯಲ್ಲಿ ತಮ್ಮ ಸಹೋದ್ಯೋಗಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು.

ಆದರೆ ಲೈನ್‌ ಅಂಪೈರ್ ಜೊತೆ ಇಂಗ್ಲಿಷ್‌ನಲ್ಲಿ ಮಾತನಾಡಿದ್ದು, ಅಸಭ್ಯ ಪದಗಳನ್ನು ಬಳಸಿಲ್ಲ ಎಂದು ರುಬ್ಲೇವ್‌ ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT