ಬುಧವಾರ, ಮಾರ್ಚ್ 3, 2021
19 °C

ಟೆನಿಸ್‌: ಕ್ವಾರ್ಟರ್‌ಫೈನಲ್‌ಗೆ ಸೆಹೆಜ್‌ ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉತ್ತಮ ಆಟವಾಡಿದ ಸೆಹಜ್‌ ಸಿಂಗ್‌ ಹಾಗೂ ಸುಬ್ರಮಣ್ಯ ವೆಂಕಟೇಶ್ ಅವರು ಎಐಟಿಎ ಟಿಎಸ್‌7 14 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಮಂಗಳವಾರ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು.

ಕೆಎಸ್‌ಎಲ್‌ಟಿಎ ಸಹಯೋಗದಲ್ಲಿ ಫಾರ್ಚೂನ್ ಸ್ಪೋರ್ಟ್ಸ್ ಅಕಾಡೆಮಿ ಆಯೋಜಿಸಿರುವ ಟೂರ್ನಿಯ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೆಹೆಜ್‌ ಸಿಂಗ್‌ 6–3, 6–1ರಿಂದ ಶೌರ್ಯ ಭಟ್ಟಾಚಾರ್ಯ ಅವರನ್ನು ಸೋಲಿಸಿದರು. ಮತ್ತೊಂದು ಪಂದ್ಯದಲ್ಲಿ ಸುಬ್ರಮಣ್ಯ 6–3, 6–2ರಿಂದ ಅಭಿಷೇಕ್ ಸುಬ್ರಮಣ್ಯನ್ ಎದುರು ಗೆದ್ದರು.

ಬಾಲಕರ ವಿಭಾಗದ 16ರ ಘಟ್ಟದ ಇತರ ಪಂದ್ಯಗಳಲ್ಲಿ ಆರಾಧ್ಯ ಕ್ರಿತಿಜ್‌ 6–2, 6–2ರಿಂದ ವಿಷ್ಣು ಮೋಹನ್‌ಗೆ, ಸಕ್ಷಮ್ ಸುಮನ್ 4–6, 6–1, 6–2ರಿಂದ ನಿತಿಲನ್‌ ಪೂನ್‌ಕುಂದ್ರನ್ ಅವರಿಗೆ ಸೋಲುಣಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು